Monday, 14th October 2024

ಡೊನೆಟ್ಸ್ಕ್‌ನಲ್ಲಿ ಐದು ಸ್ಫೋಟ: ಕೀವ್ ವಿಮಾನ ನಿಲ್ದಾಣ ಸ್ಥಳಾಂತರ

ಕೀವ್ : ಕೀವ್ ಸೇರಿದಂತೆ ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸ್ಫೋಟಗಳು ಕೇಳಿಬಂದಿವೆ. ಉಕ್ರೇನ್-ರಷ್ಯಾದಲ್ಲಿ ಯುದ್ಧವು ಬಹುತೇಕ ಪ್ರಾರಂಭವಾಗಿದೆ.  ಕೀವ್ ಮೇಲೆ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಕೀವ್ ಹೊರತುಪಡಿಸಿ, ಖಾರ್ಕಿವ್ ನಗರದಲ್ಲಿಯೂ ಸ್ಫೋಟಗಳು ಸಂಭವಿಸಿವೆ. ಗುರುವಾರ ಡೊನೆಟ್ಸ್ಕ್‌ ನಲ್ಲಿ ಐದು ಸ್ಫೋಟಗಳು ಸಂಭವಿಸಿದ್ದು  ಹಲವು ಮಂದಿ ಮೃತಪಟ್ಟಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕ್ರಮವನ್ನು ಘೋಷಿಸಿದಾಗ ಈ ಸರಣಿ ಸ್ಫೋಟಗಳು ಪ್ರಾರಂಭವಾಗಿದ್ದಾವೆ. ಉಕ್ರೇನ್-ರಷ್ಯಾ ಯುದ್ಧವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ರಷ್ಯಾ ವಿಶೇಷ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸುತ್ತಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಪುಟಿನ್ ಉಕ್ರೇನ್ ಮಿಲಿಟರಿಯನ್ನು ಕೇಳಿ ದ್ದಾರೆ. ಹದಗೆಡುತ್ತಿರುವ ಪರಿಸ್ಥಿತಿಗಳ ನಡುವೆ ಕೀವ್ ವಿಮಾನ ನಿಲ್ದಾಣವನ್ನು ಸ್ಥಳಾಂತರಿಸಲಾಗಿದೆ. ಅಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ.