Thursday, 7th December 2023

ಲಾಹೋರ್‌ – ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ

Pakistan Capital Lahore

ಲಾಹೋರ್‌: ಪಾಕಿಸ್ತಾನದ ರಾಜಧಾನಿ ಎಂದೇ ಕರೆಯಲಾಗುವ ಲಾಹೋರ್‌ಗೆ, ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ ಎಂಬ ಕಳಂಕಕ್ಕೆ ಒಳಗಾಗಿದೆ.

ಸ್ವಿಟ್ಜರ್‌ಲೆಂಡ್‌ ಮೂಲದ ‘ಪ್ಲಾಟ್‌ಫಾರ್ಮ್‌ ಐಕ್ಯೂಏರ್‌’ ಎಂಬ ವಾಯು ಗುಣಮಟ್ಟದ ಮೇಲೆ ನಿಗಾ ಇಡುವ ಕಂಪನಿ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ.

ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಲಾಹೋರ್‌ ಅಗ್ರ ಸ್ಥಾನ ಪಡೆದಿದೆ. ಬುಧವಾರ ಬೆಳಿಗ್ಗೆ ಲಾಹೋರ್‌ನ ವಾಯು ಗುಣಮಟ್ಟ ಸೂಚ್ಯಂಕ 203 ದಾಖಲಾಗಿದೆ. ನಂತರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 183 ಆಗಿದೆ.

ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳ ಪ್ರಮಾಣವೂ ಅಧಿಕಗೊಂಡಿದ್ದರಿಂದ ಸಾವಿರಾರು ಜನರು ಉಸಿರಾಟದ ತೊಂದರೆ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ. ಜನರು ಮನೆಯಲ್ಲಿಯೇ ಉಳಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ವಾಯು ಗುಣಮಟ್ಟ ಸೂಚ್ಯಂಕ 169 ಹೊಂದಿರುವ ಢಾಕಾ ಮೂರನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತ ನಾಲ್ಕನೇ ಸ್ಥಾನದಲ್ಲಿದೆ.

error: Content is protected !!