Wednesday, 11th December 2024

Lebanon-Israel war: ಹಸನ್ ನಸ್ರಲ್ಲಾ ಹತ್ಯೆಗೆ ಇಸ್ರೇಲ್‌ ನಡೆಸಿದ ʻಆಪರೇಷನ್‌ ನ್ಯೂ ಆರ್ಡರ್‌ʼ ಹೇಗಿತ್ತು? ಇಲ್ಲಿದೆ ವಿಡಿಯೋ

Hassan Nasrallah

ಬೈರುತ್‌: ಲೆಬನಾನ್‌ನಲ್ಲಿರುವ ಹೆಜ್ಬುಲ್ಲಾ ಉಗ್ರರ ತಾಣಗಳನ್ನು ಗುರಿಯಾಗಿಸಿ ಇಸ್ರೇಲ್‌ ನಡೆಸುತ್ತಿರುವ ವೈಮಾನಿಕ ದಾಳಿ(Lebanon-Israel war) ಕ್ಷಣ ಕ್ಷಣಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉಗ್ರರ 140 ಕ್ಕೂ ಹೆಚ್ಚು ತಾಣಗಳನ್ನುಇಸ್ರೇಲಿ ಸೇನೆ(Israel Army) ಧ್ವಂಸಗೊಳಿಸಿದೆ. ದಾಳಿಯಲ್ಲಿ ಹೆಜ್ಬುಲ್ಲಾಗಳ ನಾಯಕ ಹಸನ್‌ ನಸ್ರುಲ್ಲಾ(Hassan Nasrallah) ಸಾವನ್ನಪ್ಪಿರುವುದು ಹೆಜ್ಬುಲ್ಲಾಗಳಿಗೆ ಬಹುದೊಡ್ಡ ಮಟ್ಟದ ಹೊಡೆತ ಬಿದ್ದಂತಾಗಿದೆ. ಈ ನಡುವೆ ಇಸ್ರೇಲ್‌ ಸೇನೆ ತನ್ನ ಡೆಡ್ಲಿ ಅಟ್ಯಾಕ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಅವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಹೆಜ್ಬುಲ್ಲಾಗಳ ಮೇಲೆ ಇಸ್ರೇಲ್‌ ಸೇನೆ ಯಾವ ರೀತಿ ದಾಳಿ ಮಾಡಿತು ಮತ್ತು ದಾಳಿಗೂ ಮುನ್ನ ಯಾವ ರೀತಿ ಯೋಜನೆ ರೂಪಿಸಲಾಗಿತ್ತು ಎಂಬುದು ವಿಡಿಯೋದಲ್ಲಿದೆ. ಹೆಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾ ಹತ್ಯೆಗೆ ಇಸ್ರೇಲ್‌ ಸೇನೆ ಕೈಗೆತ್ತಿಕೊಂಡಿದ್ದ ಕಾರ್ಯಾಚರಣೆಗೆ ನ್ಯೂ ಆರ್ಡರ್‌ ಎಂದು ಹೆಸರಿಡಲಾಗಿತ್ತು. ನೋಡ ನೋಡ್ತಿದ್ದಂತೆ ಬ್ಯಾಕ್‌ ಟು ಬ್ಯಾಕ್‌ ಬಾಂಬ್‌ ಸ್ಫೋಟಗೊಂಡು ಏಕಾಏಕಿ ಆ ಪ್ರದೇಶ ನಿರ್ಣಾಮ ಆಗತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಸ್ರೇಲ್‌ ಸೇನೆ ಎರಡು ವಿಡಿಯೋಗಳನ್ನು ಹಂಚಿಕೊಂಡಿದ್ದು, ಒಂದು ವಿಡಿಯೋದಲ್ಲಿ ಉಗ್ರರ ನೆಲೆ ಧ್ವಂಸಗೊಳ್ಳುತ್ತಿರುವುದು ಕಂಡು ಬಂದರೆ ಮತ್ತೊಂದರಲ್ಲಿ ನಸ್ರಲ್ಲಾನ ಹತ್ಯೆಗೆ ಕೈಗೆತ್ತಿಕೊಂಡಿರುವ ಸೇನಾ ಕಾರ್ಯಾಚರಣೆಯನ್ನು ಕಾಣಬಹುದಾಗಿದೆ.

ಲೆಬನಾನ್‌ನ ದಕ್ಷಿಣ ಬೈರುತ್‌ನಲ್ಲಿರುವ ಹೆಜ್ಬುಲ್ಲಾದ ಮುಖ್ಯಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ. ಈ ಬಗ್ಗೆ ನಿನ್ನೆ ಇಸ್ರೇಲ್‌ ಸೇನೆ ಅಧಿಕೃತವಾಗಿ ಮಾಹಿತಿ ಹೊರಹಾಕಿತ್ತು.

ಹಸನ್ ನಸ್ರಲ್ಲಾ ಫೆಬ್ರವರಿ 1992ರಿಂದ ಹೆಜ್ಬುಲ್ಲಾದ ಮಿಲಿಟರಿ ಗುಂಪನ್ನು ಮುನ್ನಡೆಸುತ್ತಿದ್ದಾನೆ. ಈತ ಗುಂಪಿನ ಮೂರನೇ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇಸ್ರೇಲ್‌ ಸೈನಿಕರಿಂದ ಕೊಲ್ಲಲ್ಪಟ್ಟ ಅಬ್ಬಾಸ್ ಅಲ್-ಮುಸಾವಿಯ ಉತ್ತರಾಧಿಕಾರಿಯಾಗಿದ್ದಾನೆ. 64 ವರ್ಷದ ಈತ ಬಡ ದಿನಸಿ ವ್ಯಾಪಾರಿಯೊಬ್ಬನ ಮಗ. ನಸ್ರಲ್ಲಾ 1960ರ ಆಗಸ್ಟ್ 31ರಂದು ಬೈರುತ್‌ನ ಉತ್ತರ ಬುರ್ಜ್ ಹಮ್ಮದ್ ಉಪನಗರದಲ್ಲಿ ಜನಿಸಿದ್ದ. ಆತನಿಗೆ 8 ಮಂದಿ ಒಡಹುಟ್ಟಿದವರು ಮತ್ತು 4 ಮಂದಿ ಮಕ್ಕಳಿದ್ದಾರೆ. ಮಧ್ಯಪ್ರಾಚ್ಯದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬನಾದ ಹಸನ್ ನಸ್ರಲ್ಲಾ 2006ರಲ್ಲಿ ಇಸ್ರೇಲ್ ಜತೆಗಿನ ಯುದ್ಧದ ನಂತರ ತಲೆಮರೆಸಿಕೊಂಡಿದ್ದ. 1992ರಲ್ಲಿ ಹೆಜ್ಬುಲ್ಲಾದ ಕಮಾಂಡ್ ಆದಾಗಿನಿಂದ ನಸ್ರಲ್ಲಾ ಸಂಘಟನೆಯನ್ನು ಶಕ್ತಗೊಳಿಸಿದ್ದ.

ಈ ಸುದ್ದಿಯನ್ನೂ ಓದಿ: Hassan Nasrallah: ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಹೊಡೆದುರುಳಿಸಿದ ಇಸ್ರೇಲ್‌ ಸೇನೆ