Friday, 13th December 2024

Brunei Sultan: ಸ್ವರ್ಣ ಲೇಪಿತ ಮಹಲು, ಖಾಸಗಿ ಜೆಟ್, ಕಾರುಗಳು; ಬ್ರೂನಿ ದೊರೆಯ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್‌ ಸಂಗತಿ

Luxury life of Brunei Sultan

ಬ್ರೂನಿ:  ಏಷ್ಯಾ ಖಂಡದ ಪುಟ್ಟ ದೇಶವೊಂದು ಇಂದು ವಿಶ್ವದ ಗಮನ ಸೆಳೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ದೊರೆಯ ಐಷಾರಾಮಿ ಜೀವನ (Luxury life of Brunei Sultan). ಸುಮಾರು 30 ಬಂಗಾಳ ಹುಲಿಗಳನ್ನು (Bengal tiger) ಹೊಂದಿರುವ ಖಾಸಗಿ ಮೃಗಾಲಯಕ್ಕೆ (private zoo) ಚಿನ್ನದ ಮಹಲು (Gold mansion), ಖಾಸಗಿ ಜೆಟ್ (private jet) ಸೌಲಭ್ಯವನ್ನು ಒದಗಿಸಿದ್ದಾರೆ ಬ್ರೂನಿಯ ದೊರೆ ಹಸನಲ್ ಬೊಲ್ಕಿಯಾ (Hassanal Bolkiah). ಇದು ಅವರ ಐಷಾರಾಮಿ ಜೀವನದ ಒಂದು ಸಣ್ಣ ನೋಟವಷ್ಟೇ.

ಯುನೈಟೆಡ್ ಕಿಂಗಡಮ್ ನಿಂದ 1984ರಲ್ಲಿ ಸ್ವಾತಂತ್ರ್ಯಗಳಿಸಿದ ಬಳಿಕ ಬ್ರೂನಿ ದೇಶದ ದೊರೆ, ಪ್ರಧಾನಿಯಾಗಿ ಹಸನಲ್ ಬೊಲ್ಕಿಯಾ ಇಬ್ನಿ ಒಮರ್ ಅಲಿ ಸೈಫುದ್ದೀನ್ III ಸೇವೆ ಸಲ್ಲಿಸುತ್ತಿದ್ದಾರೆ.

ರಾಜಾ ಇಸ್ಟೆರಿ ಪೆಂಗಿರಾನ್ ಅನಕ್ ದಾಮಿತ್ ಮರಣದ ಬಳಿಕ ಅವರ ಹಿರಿಯ ಮಗ ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ III ಬ್ರೂನಿಯ ಸುಲ್ತಾನನಾಗಿ ಅಧಿಕಾರ ವಹಿಸಿಕೊಂಡರು. ಪೂರ್ಣ ಅಧಿಕಾರ ಹೊಂದಿರುವ ವಿಶ್ವದ ಕೆಲವು ರಾಜರಲ್ಲಿ ಇವರು ಒಬ್ಬರಾಗಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ಹಸನಲ್ ಬೊಲ್ಕಿಯಾ ಅವರ ನಿವ್ವಳ ಮೌಲ್ಯ 30 ಬಿಲಿಯನ್ ಡಾಲರ್. ಪ್ರಸ್ತುತ ದೀರ್ಘಕಾಲ ಸೇವೆ ಸಲ್ಲಿಸಿದ ರಾಷ್ಟ್ರದ ಮುಖ್ಯಸ್ಥರಾಗಿರುವ ಇವರು 2017ರಲ್ಲಿ ತಮ್ಮ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ರಾಣಿ ಎಲಿಜಬೆತ್ IIರ ಅನಂತರ ಇತಿಹಾಸದಲ್ಲಿ ಸುದೀರ್ಘ ಆಳ್ವಿಕೆ ನಡೆಸಿದ ಸುಲ್ತಾನ್ ಇವರಾಗಿದ್ದಾರೆ.

ಜನನ, ಶಿಕ್ಷಣ

ಹಸನಲ್ ಬೊಲ್ಕಿಯಾ ಅವರು 1946ರ ಜುಲೈ 15ರಂದು ಬ್ರೂನಿ ಟೌನ್‌ನ ಇಸ್ತಾನಾ ದಾರುಸ್ಸಲಾಮ್‌ನಲ್ಲಿ ಈಗಿನ ಬಂದರ್ ಸೆರಿ ಬೇಗವಾನ್ ನಲ್ಲಿ ಜನಿಯಿಸಿದರು. ಆಗ ಇವರ ಸುಲ್ತಾನ್ ಅಹ್ಮದ್ ತಾಜುದ್ದೀನ್ ಆಳ್ವಿಕೆ ನಡೆಸುತ್ತಿದ್ದರು. ಇವರ ತಂದೆ ಆಗ ಬ್ರೂನಿಯ ನಿರೀಕ್ಷಿತ ಉತ್ತರಾಧಿಕಾರಿಯಾಗಿದ್ದರು.

ಕೌಲಾಲಂಪುರದ ವಿಕ್ಟೋರಿಯಾ ಸಂಸ್ಥೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅನಂತರ ಸುಲ್ತಾನ್ 1967 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ರಾಯಲ್ ಮಿಲಿಟರಿ ಅಕಾಡೆಮಿ ಸ್ಯಾಂಡ್‌ಹರ್ಸ್ಟ್‌ನಿಂದ ಪದವಿ ಪಡೆದರು.

ಐಷಾರಾಮಿ ಜೀವನ

1968 ಆಗಸ್ಟ್ ನಲ್ಲಿ ಸಿಂಹಾಸನಕ್ಕೆ ಏರಿದ ಹಸನಲ್ ಬೊಲ್ಕಿಯಾ ಸುಲ್ತಾನ್ ಅವರು ಅಭಿವೃದ್ಧಿ ಕಾರ್ಯದಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದರು. ತನ್ನ ಶ್ರೀಮಂತ ಜೀವನಶೈಲಿ ಮತ್ತು ಐಷಾರಾಮಿ ಆಸ್ತಿಗಳಿಗೆ ಹೆಸರುವಾಸಿಯಾಗಿರುವ ಸುಲ್ತಾನ್ ಗೆ ತೈಲ ನಿಕ್ಷೇಪಗಳು ಮತ್ತು ನೈಸರ್ಗಿಕ ಅನಿಲ ಬಹುದೊಡ್ಡ ಆದಾಯದ ಮೂಲವಾಗಿದೆ. ಆಸಿಯಾನ್ ಮತ್ತು ಯುಎನ್‌ ನೊಡನೆ ರಾಜತಾಂತ್ರಿಕ ಸಂಬಂಧಗಳನ್ನು ನಿರ್ಮಿಸಿದರು.

Luxury life of Brunei Sultan

ಚಿನ್ನದ ಮಹಲು

ಸುಲ್ತಾನರ ಮನೆ ಇಸ್ತಾನಾ ನೂರುಲ್ ಇಮಾನ್ ಅರಮನೆಯನ್ನು 1984 ರಲ್ಲಿ ದೇಶದ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಇದು 2 ಮಿಲಿಯನ್ ಚದರ ಅಡಿ ಜಾಗವನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಅರಮನೆಯಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರಿದೆ. ಈ ಅರಮನೆಯ ಗುಮ್ಮಟವನ್ನು 22 ಕ್ಯಾರೆಟ್ ಚಿನ್ನದಿಂದ ಅಲಂಕರಿಸಲಾಗಿದೆ. ಈ ಅರಮನೆಯ ಮೌಲ್ಯವು 2,550 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ಅರಮನೆಯಲ್ಲಿ ಐದು ಈಜುಕೊಳ, 257 ಸ್ನಾನಗೃಹ ಮತ್ತು 1700 ಕ್ಕೂ ಹೆಚ್ಚು ಕೊಠಡಿಗಳನ್ನು ಒಳಗೊಂಡಿದೆ. 110 ಗ್ಯಾರೇಜ್‌ಗಳ ಜೊತೆಗೆ ಹವಾನಿಯಂತ್ರಣದೊಂದಿಗೆ 200 ಕುದುರೆ ಕೊಟ್ಟಿಗೆಗಳಿವೆ.

Luxury life of Brunei Sultan

ಚಿನ್ನ, ಹರಳುಗಳಿಂದ ವಿನ್ಯಾಸಗೊಳಿಸಲಾದ ಖಾಸಗಿ ಜೆಟ್

ಸುಲ್ತಾನ್ ತನ್ನ ಸ್ವಂತ ಬಳಕೆಗಾಗಿ ಬೋಯಿಂಗ್ 747 ನಲ್ಲಿ ಸುಮಾರು 3,000 ಕೋಟಿ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ 120 ಮಿಲಿಯನ್ ಡಾಲರ್ ಮೌಲ್ಯದ ಚಿನ್ನದ ವಾಶ್‌ಬಾಸಿನ್‌ ಅನ್ನು ಸೇರಿಸಿದ್ದಾರೆ. ಬೊಲ್ಕಿಯಾ ತನ್ನ ಮಗಳಿಗೆ ಏರ್‌ಬಸ್ ಎ340 ಅನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದರು ಎನ್ನಲಾಗುತ್ತದೆ.

Luxury life of Brunei Sultan

 ಚಿನ್ನ ಲೇಪಿತ ರೋಲ್ಸ್ ರಾಯ್ಸ್

ಬ್ರೂನಿ ಸುಲ್ತಾನ್ ವಿಶ್ವದ ಅಪರೂಪದ ಆಟೋಮೊಬೈಲ್‌ಗಳ ಅತಿದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಇದರಲ್ಲಿ ಚಿನ್ನ ಲೇಪಿತ ರೋಲ್ಸ್ ರಾಯ್ಸ್ ಕೂಡ ಸೇರಿದೆ. ಸುಮಾರು 7,000 ವಾಹನಗಳ ಸಮೂಹವನ್ನು ಹೊಂದಿದ್ದು ಇದರ ಮೌಲ್ಯ 5 ಶತಕೋಟಿ ಡಾಲರ್ ಗಿಂತ ಹೆಚ್ಚು ಎನ್ನಲಾಗುತ್ತದೆ.

300 ಫೆರಾರಿ, 500 ರೋಲ್ಸ್ ರಾಯ್ಸ್‌ಗಳು ಹಸನಲ್ ಬೊಲ್ಕಿಯಾ ಅವರ ಆಟೋಮೊಬೈಲ್‌ಗಳ ಸಂಗ್ರಹದಲ್ಲಿವೆ. ಬ್ರೂನಿ ಸುಲ್ತಾನ್ ಖರೀದಿಸಿದ ರೋಲ್ಸ್ ರಾಯ್ಸ್ ವಿಶೇಷವಾಗಿ ತೆರೆದ ಛಾವಣಿಯೊಂದಿಗೆ ವಾಹನದ ಮೇಲಿರುವ ಛತ್ರಿಗೆ ಸ್ಥಳಾವಕಾಶವನ್ನು ನೀಡಿದೆ.

Luxury life of Brunei Sultan

ಖಾಸಗಿ ಮೃಗಾಲಯ

ಹಸನಲ್ ಬೊಲ್ಕಿಯಾ ಖಾಸಗಿ ಮೃಗಾಲಯದಲ್ಲಿ ಸರಿಸುಮಾರು 30 ಬಂಗಾಳ ಹುಲಿಗಳನ್ನು ಹೊಂದಿದೆ. ಮೃಗಾಲಯವು ಕಾಕಟೂಗಳು, ಫ್ಲೆಮಿಂಗೋಗಳು ಮತ್ತು ಫಾಲ್ಕನ್‌ಗಳನ್ನು ಒಳಗೊಂಡಂತೆ ವಿಶಿಷ್ಟ ಪಕ್ಷಿಗಳಿಗೆ ನೆಲೆಯಾಗಿದೆ. ಅವುಗಳಿಗೆ ಹಾಡಲು, ಮಾತನಾಡಲು, ಬೈಸಿಕಲ್‌ಗಳನ್ನು ಓಡಿಸಲು, ಬ್ಯಾಸ್ಕೆಟ್‌ಬಾಲ್ ಆಡಲು ಕಲಿಸಿಕೊಡಲಾಗುತ್ತದೆ.

Luxury life of Brunei SultanTata Curvv : ಹೊಚ್ಚ ಹೊಸ ಕರ್ವ್‌ ಕಾರಿನ ಬೆಲೆಗಳನ್ನು ಪ್ರಕಟಿಸಿದ ಟಾಟಾ ಮೋಟಾರ್ಸ್‌, ಇಲ್ಲಿದೆ ಎಲ್ಲ ವಿವರ…

ಕ್ಷೌರಕ್ಕಾಗಿ 20,000 ಡಾಲರ್ ಖರ್ಚು

ಹಸನಲ್ ಬೊಲ್ಕಿಯಾ ದುಂದು ವೆಚ್ಚ ಮಾಡುತ್ತಾರೆ. ಅವರು ಒಂದು ಬಾರಿಯ ಕ್ಷೌರಕ್ಕಾಗಿ 20,000 ಡಾಲರ್ ಖರ್ಚು ಮಾಡುತ್ತಾರೆ. ಇದಕ್ಕಾಗಿ ಲಂಡನ್‌ನ ಮೇಫೇರ್‌ನಲ್ಲಿರುವ ಡಾರ್ಚೆಸ್ಟರ್ ಹೊಟೇಲ್ ಗೆ ಹೋಗುವ ಅವರು ಅಲ್ಲೇ ಕ್ಷೌರಿಕನನ್ನು ಆಯ್ಕೆ ಮಾಡುತ್ತಾರೆ. ಮೂರರಿಂದ ನಾಲ್ಕು ವಾರಗಳಿಗೊಮ್ಮೆ ಅಲ್ಲಿಗೆ ಭೇಟಿ ನೀಡುವ ಅವರು ಉತ್ತಮ ದರ್ಜೆಯ ಕ್ಷೌರಿಕನ ಆಯ್ಕೆಗಾಗಿ ಸರಿಸುಮಾರು 12,000 ಡಾಲರ್ ಪಾವತಿಸುತ್ತಾರೆ.