ಒಟ್ಟಾವಾ: ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣ(1985) ದಲ್ಲಿ ಖುಲಾಸೆಗೊಂಡಿದ್ದ ರಿಪುದಮನ್ ಸಿಂಗ್ ಮಲಿಕ್ನನ್ನು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿವೆ.
ಗುರುವಾರ ಬೆಳಗ್ಗೆ ಮೂರು ಗುಂಡುಗಳನ್ನು ಹಾರಿಸಲಾಗಿದ್ದು ಮಲಿಕ್ ಕುತ್ತಿಗೆಗೆ ಬಿದ್ದಿವೆ. ಗಾಯಗೊಂಡ ಮಲಿಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ವರದಿ ಮಾಡಿವೆ.
ಕೆನಡಾದ ಸರ್ರೆಯಲ್ಲಿ ಹತ್ಯೆಯಾದ ರಿಪುದಮನ್ ಸಿಂಗ್ ಮಲಿಕ್ 1985ರಲ್ಲಿ ಏರ್ ಇಂಡಿಯಾದ ಫ್ಲೈಟ್ 182 ಕನಿಷ್ಕಾ ಬಾಂಬ್ ಸ್ಫೋಟದಲ್ಲಿ 331 ಜನರನ್ನು ಕೊಂದ ಶಂಕಿತರಲ್ಲಿ ಒಬ್ಬರಾಗಿದ್ದರು. ಜೂನ್ 23, 1985 ರಂದು ಮಾಂಟ್ರಿಯಲ್ನಿಂದ ದೆಹಲಿಗೆ ಹೊರಟಿದ್ದ ಬೋಯಿಂಗ್ 747 ಕನಿಷ್ಕ, ಏರ್ ಇಂಡಿಯಾ ವಿಮಾನ 182ರ ಸ್ಫೋಟದ ಮೂವರು ಪ್ರಮುಖ ಆರೋಪಿಗಳಲ್ಲಿ ಮಲಿಕ್, ಇಂದರ್ಜೀತ್ ಸಿಂಗ್ ರಿಯಾತ್ ಮತ್ತು ಅಜೈಬ್ ಸಿಂಗ್ ಬಗ್ರಿ ಇದ್ದರು.
ಘಟನೆಯಲ್ಲಿ ಎಲ್ಲಾ 329 ಮಂದಿ ಮೃತಪಟ್ಟಿದ್ದರು. ಮಲಿಕ್ ಮತ್ತು ಬಾಗ್ರಿ ವಿರುದ್ಧ 329 ಜನರ ಕೊಲೆಯ ಆರೋಪ ಹೊರಿಸ ಲಾಗಿತ್ತು.