Tuesday, 10th December 2024

Mark Zuckerberg: ಮಾರ್ಕ್ ಜುಕರ್‌ಬರ್ಗ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ!

Mark Zuckerberg

ಮೆಟಾ ಸಿಇಒ (Meta CEO) ಮಾರ್ಕ್ ಜುಕರ್‌ಬರ್ಗ್ (Mark Zuckerberg) ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ (world’s second richest person) ಹೊರಹೊಮ್ಮಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಪ್ರಕಾರ ಅವರು ಅಮೆಜಾನ್ ಮಾಜಿ ಸಿಇಒ ಮತ್ತು ಅಧ್ಯಕ್ಷ (former Amazon CEO and president ) ಜೆಫ್ ಬೆಜೋಸ್ (Jeff Bezos) ಅವರನ್ನು ಹಿಂದಿಕ್ಕಿ ಈ ಸ್ಥಾನಕ್ಕೇರಿದ್ದಾರೆ.

ಮಾರ್ಕ್ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯವು 206.2 ಶತಕೋಟಿ ಡಾಲರ್ ಆಗಿದೆ. ಜೆಫ್ ಬೆಜೋಸ್ ಅವರ ನಿವ್ವಳ ಆದಾಯ ಮೌಲ್ಯ 205.1 ಬಿಲಿಯನ್ ಡಾಲರ್ ಆಗಿದೆ. ಪ್ರಸ್ತುತ ಫೇಸ್‌ಬುಕ್ ಸಹ-ಸಂಸ್ಥಾಪಕರಾದಾ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯ 269 ಬಿಲಿಯನ್ ಡಾಲರ್ ಆಗಿದ್ದು, ಮಾರ್ಕ್ ಜುಕರ್‌ಬರ್ಗ್ ಅವರಿಗಿಂತ ಸುಮಾರು 50 ಬಿಲಿಯನ್‌ ಡಾಲರ್ ಹೆಚ್ಚು ನಿವ್ವಳ ಆದಾಯ ಮೌಲ್ಯ ಹೊಂದಿದ್ದಾರೆ ಎಂದು ಸೂಚ್ಯಂಕ ತೋರಿಸಿದೆ.

Mark Zuckerberg

ಮಾರ್ಕ್ ಜುಕರ್‌ಬರ್ಗ್‌ಗೆ 2024 ಹೇಗಿತ್ತು?

ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಮೆನ್ಲೋ ಪಾರ್ಕ್‌ನಲ್ಲಿ ಶೇ. 13ರಷ್ಟು ಪಾಲನ್ನು ಹೊಂದಿರುವ ಮಾರ್ಕ್ ಜುಕರ್‌ಬರ್ಗ್ ಈ ವರ್ಷದಲ್ಲಿ ಈವರೆಗೆ 78 ಶತಕೋಟಿ ಡಾಲರ್ ಸಂಪತ್ತು ಗಳಿಸಿದ್ದಾರೆ. ಬ್ಲೂಮ್‌ಬರ್ಗ್ ಸೂಚ್ಯಂಕದ 500 ಮಂದಿ ಶ್ರೀಮಂತರಲ್ಲಿ ಇದು ಅತ್ಯಧಿಕವಾಗಿದೆ.

ಮೆಟಾ ಸ್ಟಾಕ್ ಮಾರುಕಟ್ಟೆ ಹೇಗಿದೆ?

ಹೂಡಿಕೆದಾರರ ಉತ್ಸಾಹದ ಜೊತೆಗೆ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತಿನ ಹೆಚ್ಚಳದಿಂದಾಗಿ ಈ ವರ್ಷದ ಆರಂಭದಿಂದ ಮೆಟಾ ಷೇರುಗಳು ಸುಮಾರು ಶೇ. 70ರಷ್ಟು ಜಿಗಿದಿವೆ. ಹೂಡಿಕೆಗಳಲ್ಲಿ ಕೃತಕ ಬುದ್ಧಿಮತ್ತೆಯ (AI) ಪ್ರಯೋಗ ತನ್ನ ಬೆಳವಣಿಗೆಗೆ ಕಾರಣವೆಂದು ಮೆಟಾ ಹೇಳಿದೆ.

2022ರ ಕೊನೆಯಲ್ಲಿ 21,000 ಉದ್ಯೋಗಿಗಳನ್ನು ಕಂಪನಿ ತೆಗೆದು ಹಾಕಿತ್ತು. ಕಂಪನಿಯ ವೆಚ್ಚ ಕಡಿತ ಯೋಜನೆಯನ್ನು ಪ್ರಾರಂಭಿಸಿದ ಮಾರ್ಕ್ ಜುಕರ್‌ಬರ್ಗ್ ಅವರು ಆದಾಯದ ಹೆಚ್ಚಳ, ಕಂಪನಿಯ ಬೆಳವಣಿಗೆಯಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹೂಡಿಕೆದಾರರು.

PAN Card: ಪಾನ್ ಕಾರ್ಡ್ ಸಂಖ್ಯೆ ಏನೆಲ್ಲಾ ಹೇಳುತ್ತದೆ ಗೊತ್ತೇ?

ಮೆಟಾದಲ್ಲಿ ಹೂಡಿಕೆದಾರರ ವಿಶ್ವಾಸ ಹೇಗಿದೆ?

ಪ್ರಸ್ತುತ ವರ್ಚುವಲ್ ಮತ್ತು ವರ್ಧಿತ ರಿಯಾಲಿಟಿ ತಂತ್ರಜ್ಞಾನಗಳಿಗಾಗಿ ಮೆಟಾ ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ. ಆದರೆ ಕಂಪನಿಯು ಹೂಡಿಕೆದಾರರ ವಿಶ್ವಾಸವನ್ನು ಮುರಿದಿಲ್ಲ. ಹೀಗಾಗಿ ಅವರು ಕಂಪನಿಯನ್ನು ಬೆಂಬಲಿಸುವುದನ್ನು ಮುಂದುವರೆಸಿದ್ದಾರೆ. ಕಳೆದ ವಾರ ಮೆಟಾ ತನ್ನ ಓರಿಯನ್ ಎ ಆರ್ ಗ್ಲಾಸ್‌ಗಳನ್ನು ಪರಿಚಯಿಸಿತ್ತು. ಇದು ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತ್ತು.