Friday, 13th December 2024

ಸಲಿಂಗ ವಿವಾಹ ಸಮಾನತೆ ರಕ್ಷಿಸುವ ಮಸೂದೆಗೆ ಸಿಕ್ಕಿತು ಅಂಗೀಕಾರ

ವಾಷಿಂಗ್ಟನ್: ಸಲಿಂಗ ವಿವಾಹದ ಮಾನ್ಯತೆಯನ್ನು ಹಿಂತೆಗೆದುಕೊಳ್ಳಬಹುದು ಎಂಬ ಭಯದ ನಡುವೆಯೇ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಗಳವಾರ ಸಲಿಂಗ ವಿವಾಹ ಸಮಾನತೆ ರಕ್ಷಿಸುವ ಮಸೂದೆ ಯನ್ನು ಅಂಗೀಕರಿಸಿದೆ.

‘ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್’ ಎಂಬ ಶೀರ್ಷಿಕೆಯ ಶಾಸನವು 267 ರಿಂದ 157 ಮತಗಳಲ್ಲಿ ಅಂಗೀಕರಿಸಲ್ಪಟ್ಟಿದೆ. 47 ರಿಪಬ್ಲಿಕನ್ನರು ಈ ಕ್ರಮವನ್ನು ಬೆಂಬಲಿಸಿದ್ದಾರೆ. ಆದರೆ ಸೆನೆಟ್‌ನಲ್ಲಿ ಅನಿಶ್ಚಿತವಾಗಿವೆ. 100 ಸದಸ್ಯರಿರುವ ಸೆನೆಟ್‌ನಲ್ಲಿ ಡೆಮೋ ಕ್ರಾಟ್‌ ಗಳು 50 ಸ್ಥಾನಗಳನ್ನು ಹೊಂದಿದ್ದಾರೆ.

ಮಸೂದೆಯು ಅಮೆರಿಕಾದ ರಾಜ್ಯಗಳಲ್ಲಿ ಮತ್ತೊಂದು ರಾಜ್ಯದಲ್ಲಿ ನಡೆದ ಮದುವೆ ಯನ್ನು ಮಾನ್ಯಗೊಳಿಸಲು ಒತ್ತಾಯಿಸು ತ್ತದೆ. ಜೊತೆಗೆ ಈ ಮಸೂದೆಯು 1996 ರ ಮದುವೆಯ ರಕ್ಷಣಾ ಕಾಯಿದೆಯನ್ನು ರದ್ದುಗೊಳಿಸುತ್ತದೆ. ಆ ಕಾಯಿದೆಯಲ್ಲಿ ಮದುವೆ ಎನ್ನುವುದು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ನಡುವಿನ ಸಂಬಂಧ ಎಂದು ವ್ಯಾಖ್ಯಾನಿಸುತ್ತದೆ.

ಸುಪ್ರೀಂಕೋರ್ಟ್ ಜೂನ್ 24 ರಂದು ರಾಷ್ಟ್ರವ್ಯಾಪಿ ಗರ್ಭಪಾತದ ಹಕ್ಕುಗಳನ್ನು ಪ್ರತಿಪಾದಿಸುವ 1973 ರ ತೀರ್ಪು ರೋಯ್ ವಿ ವೇಡ್ ಅನ್ನು ರದ್ದುಗೊಳಿಸಿತು.

ಮೇ ತಿಂಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಶೇಕಡಾ 71 ರಷ್ಟು ಅಮೆರಿಕನ್ನರು ಸಲಿಂಗಿಗಳ ಸಂಬಂಧಗಳನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.