Saturday, 7th September 2024

ಕಾರ್​ ರೇಸಿಂಗ್​ ವೇಳೆ ಗುಂಡಿನ ದಾಳಿ: 10 ಮಂದಿ ಸಾವು

ಮೆಕ್ಸಿಕೋ: ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಲಾಗಿದ್ದ ಕಾರ್​ ರೇಸ್​ನಲ್ಲಿ ಭೀಕರ ಶೂಟೌಟ್​ ಘಟನೆ ವರದಿಯಾಗಿದೆ.

ಆಗಂತುಕರ ಗುಂಡಿನ ದಾಳಿಗೆ 10 ಮಂದಿ ಕಾರ್​ ರೇಸರ್​ಗಳು ಪ್ರಾಣ ಕಳೆದುಕೊಂಡಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿ ದ್ದಾರೆ.

ಉತ್ತರ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಕಾರ್‌ ರೇಸಿಂಗ್​ ನಡೆಯುತ್ತಿತ್ತು. ಈ ವೇಳೆ ವ್ಯಾನ್ನಲ್ಲಿ ಬಂದ ಬಂದೂಕು ಧಾರಿಗಳು ಕಾರ್‌ ರೇಸ್​ನಲ್ಲಿ ಭಾಗವಹಿಸಿದವರ ಮೇಲೆ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ ಎಂದು ಬಾಜಾ ಕ್ಯಾಲಿಫೋರ್ನಿಯಾ ಸ್ಟೇಟ್ ಅಟಾರ್ನಿ ಜನರಲ್ ಕಚೇರಿ ತಿಳಿಸಿದೆ.

ಥ್ರಿಲ್ಲಿಂಗ್​ ನೀಡಬೇಕಿದ್ದ ಕಾರ್​ ರೇಸಿಂಗ್​ನಲ್ಲಿ ಗುಂಡಿನ ಮೊರೆತದಿಂದ ಜನರು ದಿಕ್ಕಾ ಪಾಲಾಗಿ ಓಡಿದ್ದಾರೆ. ಯಾವ ಕಾರಣಕ್ಕಾಗಿ ಶೂಟೌಟ್​ ನಡೆಸಲಾಗಿದೆ ಎಂಬುದು ತಿಳಿದು ಬಂದಿಲ್ಲ. ಸುದ್ದಿ ತಿಳಿದ ರಾಜ್ಯ ಪೊಲೀಸ್, ಮೆರೀನ್, ಅಗ್ನಿಶಾಮಕ ಇಲಾಖೆ ಮತ್ತು ಮೆಕ್ಸಿಕನ್ ರೆಡ್ ಕ್ರಾಸ್ ಮತ್ತು ಇತರ ಏಜೆನ್ಸಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ಬಿಗಿ ಬಂದೋಬಸ್ತ್​ ನೀಡಿದ್ದಾರೆ.

ಗಾಯಗೊಂಡ ರೇಸರ್​ಗಳನ್ನು ಉತ್ತರ ಬಾಜಾ ಕ್ಯಾಲಿಫೋರ್ನಿಯಾದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

error: Content is protected !!