Wednesday, 11th December 2024

ಖಾಸಗಿ ವಿಮಾನಗಳ ಪರಸ್ಪರ ಡಿಕ್ಕಿ: ಐವರ ಸಾವು

ಮೆಕ್ಸಿಕೋ ಸಿಟಿ: ಮೆಕ್ಸಿಕೋದ ಉತ್ತರ ರಾಜ್ಯ ಡುರಾಂಗೊದಲ್ಲಿ ಎರಡು ಖಾಸಗಿ ವಿಮಾನಗಳು ಡಿಕ್ಕಿಯಾಗಿ ಪತನಗೊಂಡಿದೆ. ಘಟನೆಯಲ್ಲಿ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಪಶ್ಚಿಮ ಡುರಾಂಗೊದಲ್ಲಿರುವ ಲಾ-ಗಲಾನ್ಸಿಟಾ ಪಟ್ಟಣದಲ್ಲಿ ಘಟನೆ ನಡೆದಿದೆ.

ಎರಡು ಸೆಸ್ನಾ ಲಘು ವಿಮಾನಗಳಾಗಿದ್ದು ಒಂದು ಟೇಕ್ ಆಫ್ ಆಗುವಾಗ ಮತ್ತು ಇನ್ನೊಂದು ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಅವಘಡ ಘಟಿಸಿದೆ. ತಕ್ಷಣವೇ ಎರಡೂ ವಿಮಾನಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ಪಶ್ಚಿಮ ಮೆಕ್ಸಿಕೋ ರಾಜ್ಯ ಜಲಿಸ್ಕೋದಲ್ಲಿ ಭೀಕರ ಪ್ರವಾಹ ಸಂಭವಿಸಿ ಏಳು ಜನ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ.