Wednesday, 11th December 2024

ಸರ್ವರ್ ಡೌನ್, ಉದ್ಯೋಗಿಗಳಿಗೆ ಭಾರಿ ಖುಷಿ: ಕಂಪೆನಿಗಳ ಕೆಂಗಣ್ಣಿಗೆ ಗುರಿ

ವಾಷಿಂಗ್ಟನ್: ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್​​ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್​ ಭಾರತದಲ್ಲಿ ಕೆಲವು ಕಾಲ ಡೌನ್ ಆಗಿತ್ತು.

ಟೀಮ್ಸ್​ ಸರ್ವರ್ ಡೌನ್ ಆಗಿರುವ ಬಗ್ಗೆ ಡೌನ್​ಡಿಟೆಕ್ಟರ್ ಸುಮಾರು 3,500ರಷ್ಟು ಮಂದಿ ವರದಿ ಮಾಡಿದ್ದರು. ಲಿಂಕ್ಡ್​ಇನ್ ಸರ್ವರ್ ಕೂಡ ಡೌನ್ ಆಗಿತ್ತು.

ಈ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಗಳು ಭಾರಿ ಖುಷಿಯಲ್ಲಿ ಕೆಲವು ಕ್ಷಣ ಕಳೆದಿರುವ ಫೋಟೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೆಲವು ನಿಮಿಷಗಳ ಆನಂದವನ್ನು ಇವರು ಆಚರಿಸುತ್ತಿದ್ದು, ಅದೀಗ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ತನಿಖೆಗೆ ಆದೇಶಿಸಿದೆ.

ಸೆಲೆಬ್ರೇಷನ್​ ಮಾಡಿ ವೈರಲ್​ ಆಗಿರುವುದು ಸಿಬ್ಬಂದಿಯ ಆತಂಕಕ್ಕೂ ಕಾರಣವಾಗಿದೆ. ಈ ಆನಂದದ ಕ್ಷಣಗಳು ವಿವಿಧ ರೀತಿಯ ಮೀಮ್ಸ್​ಗಳೊಂದಿಗೆ ವೈರಲ್​ ಆಗುತ್ತಿದೆ.

ಭಾರತ ಸೇರಿದಂತೆ ಜಾಗತಿಕವಾಗಿ 2023 ರಲ್ಲಿ ದಿನಕ್ಕೆ ಸರಾಸರಿ 1,600 ಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಶೇರ್‌ಚಾಟ್, ಓಲಾ, ಸ್ಕಿಟ್.ಐ, ಡಂಜೊ ಸೇರಿದಂತೆ ಹಲವು ಕಂಪೆನಿಗಳು ಇವುಗಳಲ್ಲಿ ಸೇರಿದೆ.