Friday, 13th December 2024

ಸಕಲ ಭಾಷಾ ವಲ್ಲಭ ಈ ರಿಪೋರ್ಟರ್‌

ವಾಷಿಂಗ್ಟನ್: ಹಿರಿಯ ಪತ್ರಕರ್ತನೊಬ್ಬ ಬರೋಬ್ಬರಿ ಆರು ಭಾಷೆಗಳಲ್ಲಿ ವರದಿ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ.  ಹಿರಿಯ ಪತ್ರಕರ್ತನ ಕುಶಲತೆಗೆ ಟ್ವಿಟರ್​​​ನಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಬಹುಭಾಷಾ ವರದಿಗಾರ ಫಿಲಿಪ್​ ಕ್ರೌಥರ್​​ ಫ್ರಾನ್ಸ್ ಶ್ವೇತಭವನದ ಪತ್ರಕರ್ತರು. ಇಂಗ್ಲಿಷ್​ ಹಾಗೂ ಫ್ರೆಂಚ್​ ಭಾಷೆಯಲ್ಲಿ ನಿರರ್ಗಳ ವಾಗಿ ಮಾತನಾಡುವ ಕ್ರೌಥರ್​​​ಗೆ ಇತರೆ ಭಾಷೆಗಳ ಮೇಲೂ ಉತ್ತಮ ಹಿಡಿತವಿದೆ.

ಬ್ರಿಟಿಷ್​ ತಂದೆ ಹಾಗೂ ಜರ್ಮನ್​ ತಾಯಿಯ ಪುತ್ರರಾದ ಫಿಲಿಫ್​, ಜರ್ಮನ್​, ಫ್ರೆಂಚ್​, ಸ್ಪ್ಯಾನಿಶ್​, ಇಂಗ್ಲಿಷ್​ ಹಾಗೂ ಪೋರ್ಚು ಗೀಸ್​ ಭಾಷೆಯನ್ನ ನಿರರ್ಗಳವಾಗಿ ಮಾತನಾಡಬಲ್ಲರು. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಕ್ರೌಥರ್​ ಟ್ಯಾಲೆಂಟ್​ಗೆ ನೆಟ್ಟಿಗರು ತಲೆ ಬಾಗಿದ್ದಾರೆ.