Saturday, 14th December 2024

ಬ್ರಿಟನ್‌ನಲ್ಲಿ ಲಾಕ್‌ಡೌನ್: ಫೆಬ್ರವರಿ ಮಧ್ಯ ಅವಧಿಯವರೆಗೆ ಜಾರಿ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮತ್ತೊಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ.

ಕೊರೊನಾ ವೈರಸ್ ರೂಪಾಂತರಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾ ಗಿದೆ. ನಮ್ಮ ಹೆಣಗಾಟದ ಕೊನೆಯ ಹಂತಕ್ಕೆ ನಾವು ಕಾಲಿರಿಸುತ್ತಿದ್ದೇವೆ ಎಂದು ನಿಜಕ್ಕೂ ನಂಬಿದ್ದೇನೆ’ ಎಂದು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಕನಿಷ್ಠ ಫೆಬ್ರವರಿ ಮಧ್ಯ ಅವಧಿಯವರೆಗೆ ಜಾರಿಯಲ್ಲಿರಲಿದೆ. ಬ್ರಿಟನ್ ಮಾರ್ಗಸೂಚಿ ಗಳ ಪ್ರಕಾರ, ಎಲ್ಲ ತೀರಾ ಅಗತ್ಯವಲ್ಲದ ಅಂಗಡಿಗಳು, ವೈಯಕ್ತಿಕ ಕಾಳಜಿ ಸೇವೆಗಳು ಮುಚ್ಚಿರಲಿವೆ. ರೆಸ್ಟೋರೆಂಟ್‌ಗಳಲ್ಲಿ ಟೇಕ್ ಅವೇ ಸೇವೆ ಮಾತ್ರ ಲಭ್ಯವಿರಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು, ಕಾಲೇಜುಗಳು ಕೂಡ ತೆರೆಯುವುದಿಲ್ಲ. ಫೆಬ್ರವರಿ ಮಧ್ಯಭಾಗದವರೆಗೂ ಕ್ಯಾಂಪಸ್‌ಗೆ ಬರು ವಂತಿಲ್ಲ ಎಂದು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ.

ಬೋರಿಸ್ ಜಾನ್ಸನ್ ಅವರ ಘೋಷಣೆಗೂ ಮುನ್ನ ಇಂಗ್ಲೆಂಡ್‌, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನ ನಾಲ್ವರು ಮುಖ್ಯ ಆರೋಗ್ಯ ಅಧಿಕಾರಿಗಳು, ಶೀಘ್ರ ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದರೆ 21 ದಿನಗಳ ಒಳಗೆ ಆರೋಗ್ಯ ಸೇವೆಗಳು ತೀರಾ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಹೇಳಿದ್ದರು.

ಸ್ಕಾಟ್ಲೆಂಡ್‌ನ ನಿಕೋಲಾ ಸ್ಟುರ್ಜಿಯಾನ್ ಮತ್ತು ವೇಲ್ಸ್‌ನ ಮಾರ್ಕ್ ಡ್ರೇಕ್ ಫೋರ್ಡ್ ಕೂಡ ಜನವರಿ ಅಂತ್ಯವರೆಗೂ ರಾಷ್ಟ್ರ ವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ.