Saturday, 14th December 2024

ಮೌಂಟ್ ಎವರೆಸ್ಟ್​ ಬಳಿ ಹೆಲಿಕಾಪ್ಟರ್ ಪತನ: ಅನಗತ್ಯ ಹಾರಾಟ ನಿಷೇಧ

ನೇಪಾಳ: ಮೌಂಟ್ ಎವರೆಸ್ಟ್​ ಬಳಿ ಹೆಲಿಕಾಪ್ಟರ್ ಪತನ 6 ಮಂದಿ ಮೃತಪಟ್ಟ ಬಳಿಕ ನೇಪಾಳ ಸರ್ಕಾರ ಕೆಲವು ನಿರ್ಬಂಧ ಗಳನ್ನು ವಿಧಿಸಿದೆ. ಅನಗತ್ಯ ವಿಮಾನಗಳ ಹಾರಾಟವನ್ನು 2 ತಿಂಗಳವರೆಗೆ ನಿಷೇಧಿಸಿದೆ.

ಪೂರ್ವ ನೇಪಾಳದ ಮೌಂಟ್ ಎವರೆಸ್ಟ್ ಬಳಿ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಪತನ ಗೊಂಡಿದ್ದು, ಮೆಕ್ಸಿಕನ್ ಕುಟುಂಬದ ಐದು ಸದಸ್ಯರು ಮತ್ತು ಪೈಲಟ್ ಸಾವನ್ನಪ್ಪಿದ್ದಾರೆ.

ಮನಂಗ್ ಏರ್‌ನ ಹೆಲಿಕಾಪ್ಟರ್ 9ಎನ್-ಎಎಂವಿ ಸೋಲುಖುಂಬು ಜಿಲ್ಲೆಯ ಸುರ್ಕೆ ವಿಮಾನ ನಿಲ್ದಾಣದಿಂದ ಕಠ್ಮಂಡುವಿಗೆ ಮತ್ತು 10.13 ಕ್ಕೆ ಹಠಾತ್ತನೆ 12,000 ಅಡಿ ಎತ್ತರದಲ್ಲಿ ಟೇಕಾಫ್ ಆಗಿದ್ದು, ಸಂಪರ್ಕ ಕಡಿತಗೊಂಡಿತ್ತು ಎಂದು ಜ್ಞಾನೇಂದ್ರ ಭುಲ್ ತಿಳಿಸಿದ್ದಾರೆ.

ದೂರದ ಪರ್ವತ ಪ್ರದೇಶವಾದ ಸೊಲುಖುಂಬು ಜಿಲ್ಲೆಯ ಲಿಖುಪಿಕೆ ಗ್ರಾಮೀಣ ಪುರ ಸಭೆಯ ಲಾಮ್ಜುರಾ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.

ಶೋಧ ಕಾರ್ಯಾಚರಣೆ ವೇಳೆ ಅಪಘಾತದ ಸ್ಥಳದಿಂದ ಎಲ್ಲಾ ಆರು ಜನರ ಶವಗಳನ್ನು ಹೊರತೆಗೆಯಲಾಗಿದೆ.

ನೇಪಾಳದಲ್ಲಿ ಪ್ರವಾಸಿಗರ ಸಂಖ್ಯೆ ಮೇ ತಿಂಗಳ ಬಳಿಕ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಕಡಿಮೆ ಗೋಚರತೆ ಮತ್ತು ಅನಿಯಮಿತ ಹವಾಮಾನದ ಕಾರಣದಿಂದಾಗಿ ಪ್ರವಾಸಿಗರನ್ನು ಗುಡ್ಡಗಾಡು ಪ್ರದೇಶಗಳಿಗೆ ಕರೆದೊಯ್ಯುವ ಕೆಲವೇ ವಿಮಾನ ಗಳಿವೆ.