Friday, 13th December 2024

ಕೋವಿಡ್ ಕರ್ಫ್ಯೂ ಉಲ್ಲಂಘನೆ: ದಂಡ ವಿಧಿಸದೆ, ಚುಂಬಿಸಿಕೊಂಡ ಪೊಲೀಸ್‌

ಪೆರು: ಪೆರು ದೇಶದಲ್ಲಿ ಪೊಲೀಸ್ ಅಧಿಕಾರಿ ದಂಡ ವಿಧಿಸುವ ಬದಲು ಮಹಿಳೆಯೊಬ್ಬಳಿಂದ ಚುಂಬನ ಪಡೆದಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.

ವೈರಲ್ ಆಗಿರುವ ಸಿಸಿಟಿವಿ ವಿಡಿಯೋ ತುಣುಕಿನಲ್ಲಿ, ಲಿಮಾದಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿ ಮಹಿಳೆಗೆ ದಂಡ ವಿಧಿಸುವುದಕ್ಕೆ ಬದಲಾಗಿ ದಂಡ ಕೊಡದೆ ಚುಂಬಿಸುವುದಾಗಿ ಮನವೊಲಿಸಿದ್ದು ವೀಡಿಯೋದಲ್ಲಿ ಕಾಣುತ್ತದೆ.

ದಂಡದ ಶುಲ್ಕ ವಿಧಿಸಲು ಪ್ರಾರಂಭಿಸಿದಾಗ ಮಹಿಳೆ ಅಧಿಕಾರಿಗೆ ಹತ್ತಿರವಾಗುವುದನ್ನು ಕಾಣಬಹುದು, ಆದರೆ ಕೆಲವು ಸೆಕೆಂಡು ಗಳ ಹಿಂಜರಿಕೆಯ ನಂತರ, ಅಧಿಕಾರಿ ಅವಳನ್ನು ಚುಂಬಿಸಲು ಮುಂದಾಗುತ್ತಾನೆ.

ಮಿರಾಫ್ಲೋರ್ಸ್ ಬೋರ್ಡ್ವಾಕ್ ಎಂದು ಕರೆಯಲ್ಪಡುವ ಮಾಲೆಕಾನ್ ಡೆ ಲಾ ಮರೀನಾದಲ್ಲಿ ಪೊಲೀಸ್ ಅಧಿಕಾರಿ ಮಹಿಳೆ ಯನ್ನು ತಡೆದಿದ್ದರು.