Friday, 13th December 2024

ಅಫ್ಘಾನಿಸ್ತಾನದಲ್ಲಿ ಬ್ಯೂಟಿ ಪಾರ್ಲರ್ ಗಳ ನಿಷೇಧ: ಪ್ರತಿಭಟನೆ

ಕಾಬೂಲ್: ಅಫ್ಘಾನಿಸ್ತಾನ (Afghanistan) ದಲ್ಲಿ ನೂರಾರು ಮಹಿಳೆಯರು ಬುಧವಾರ ಬ್ಯೂಟಿ ಪಾರ್ಲರ್(BeautyParlour) ಗಳ ನಿಷೇಧವನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ತಾಲಿಬಾನ್ ರಾಷ್ಟ್ರವ್ಯಾಪಿ ಬ್ಯೂಟಿ ಪಾರ್ಲರ್ ಮುಚ್ಚಲು ಆದೇಶಿಸಿದ ನಂತರ ಹಲವೆಡೆ ನಡೆದ ಪ್ರತಿಭಟನೆಯನ್ನು ತಡೆಯಲು ಭದ್ರತಾ ಪಡೆಗಳು ಜಲಫಿರಂಗಿಗಳನ್ನು ಬಳಸಿ ದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದೆ.

ತಾಲಿಬಾನ್ ತಿಂಗಳ ಆರಂಭದಲ್ಲಿ ಅವರು ಅಫ್ಘಾನಿಸ್ತಾನದ ಎಲ್ಲಾ ಪಾರ್ಲರ್ ಗಳನ್ನು ಮುಚ್ಚಲು ಒಂದು ತಿಂಗಳ ಕಾಲಾವಕಾಶ ನೀಡುವುದಾಗಿ ಹೇಳಿತ್ತು.

ತಾಲಿಬಾನ್ ಸಲೂನ್‌ಗಳನ್ನು ಕಾನೂನುಬಾಹಿರಗೊಳಿಸುತ್ತಿದ್ದು, ಇದು ಇಸ್ಲಾಂನಿಂದ ನಿಷೇಧಿಸಲ್ಪಟ್ಟ ಸೇವೆಗಳನ್ನು ನೀಡುತ್ತಿದೆ ಮತ್ತು ಮದುವೆ, ಹಬ್ಬಗಳ ಸಮಯದಲ್ಲಿ ವರನ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತದೆ ಎಂದು ಹೇಳಿದೆ.

ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡ್ಜಾದಾನ ಅಫ್ಘಾನ್ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲಿನ ಇತ್ತೀಚಿನ ನಿರ್ಬಂಧ, ಶಿಕ್ಷಣ, ಸಾರ್ವಜನಿಕ ಸ್ಥಳಗಳು ಮತ್ತು ಹೆಚ್ಚಿನ ಉದ್ಯೋಗಗಳಿಂದ ಅವರನ್ನು ನಿರ್ಬಂಧಿಸುವ ಶಾಸನಗಳ ನಂತರ ಈ ಬೆಳವಣಿಗೆ ನಡೆದಿದೆ.