Sunday, 10th November 2024

ಒಪ್ಪೊ ಕಂಪನಿಯ ಚಿಪ್‌ ವಿನ್ಯಾಸ ಘಟಕ ಮುಚ್ಚುಗಡೆ

ಶಾಂಘೈ: ಸ್ಮಾರ್ಟ್‌ಫೋನ್‌ ತಯಾರಿಸುವ ಚೀನಾದ ಒಪ್ಪೊ ಕಂಪನಿಯು ಚಿಪ್‌ ವಿನ್ಯಾಸ ಮಾಡುವ ಘಟಕವನ್ನು ಮುಚ್ಚುವು ದಾಗಿ ಹೇಳಿದೆ.

ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಮತ್ತು ಸ್ಮಾರ್ಟ್‌ಫೋನ್‌ ಮಾರಾಟ ಇಳಿಕೆ ಆಗಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.

ಚೀನಾದಲ್ಲಿ ದೇಶಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿರುವ ಒಪ್ಪೊ, 2019ರಲ್ಲಿ ಸ್ಥಾಪಿಸಿರುವ ಜೆಕು ಘಟಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊ ಮತ್ತು ಫೊಟೊಗ್ರಫಿ ಗುಣಮಟ್ಟ ಸುಧಾರಣೆಗೆ ಬಳಸುವ ಮಾರಿಸಿಲಿಕಾನ್ ಎಕ್ಸ್‌ ಚಿಪ್‌ ತಯಾರಿಕೆಯನ್ನು ಸಹ ನಿಲ್ಲಿಸುವುದಾಗಿ ತಿಳಿಸಿದೆ.