Wednesday, 11th December 2024

ಪಾಕಿಸ್ತಾನದ ಅತಿದೊಡ್ಡ ನೌಕಾ ವಿಮಾನ ನಿಲ್ದಾಣ ಪಿಎನ್‌ಎಸ್ ಸಿದ್ದಿಕ್ ಮೇಲೆ ದಾಳಿ

ಪಾಕಿಸ್ತಾನ: ಎರಡನೇ ಅತಿದೊಡ್ಡ ನೌಕಾ ವಿಮಾನ ನಿಲ್ದಾಣವಾದ ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ದಿಕ್ ದಾಳಿಗೆ ಒಳಗಾಗಿದೆ.

ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ(ಬಿಎಲ್‌ಎ)ಯ ಮಜೀದ್ ಬ್ರಿಗೇಡ್ ಟರ್ಬತ್‌ನಲ್ಲಿರುವ ನೌಕಾ ವಾಯುನೆಲೆಯ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಮಜೀದ್ ಬ್ರಿಗೇಡ್ ಬಲೂಚಿಸ್ತಾನದಲ್ಲಿ ಚೀನಾದ ಹೂಡಿಕೆಗಳನ್ನು ಟೀಕಿಸಿದ್ದು, ಚೀನಾ ಮತ್ತು ಪಾಕಿಸ್ತಾನ ಎರಡೂ ಪ್ರದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ತನ್ನ ಯೋಧರು ವಾಯುನೆಲೆಯೊಳಗೆ ನುಸುಳಿದ್ದಾರೆ ಎಂದು BLA ಹೇಳಿಕೊಂಡಿದೆ.

ಭಾರೀ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಮೂರು ಗಂಟೆಗಳ ಕಾಲ ಮುಂದುವರಿದವು. ಫ್ರಾಂಟಿಯರ್ ಕಾರ್ಪ್ಸ್ ಹಲವಾರು ಪ್ರಮುಖ ಟರ್ಬಟ್ ರಸ್ತೆಗಳನ್ನು ನಿರ್ಬಂಧಿಸಿದೆ. ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿಯ ದೊಡ್ಡ ತುಕಡಿಯು ನೌಕಾ ವಾಯುನೆಲೆಗೆ ತೆರಳಿದೆ.

ದಾಳಿಯಲ್ಲಿ “ಒಂದು ಡಜನ್‌ಗಿಂತಲೂ ಹೆಚ್ಚು” ಪಾಕಿಸ್ತಾನಿ ಸಿಬ್ಬಂದಿಯನ್ನು ಕೊಂದಿರುವುದಾಗಿ BLA ಹೇಳಿಕೊಂಡಿದೆ. ಪಾಕ್ ಸೇನೆ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.

ಟರ್ಬಟ್‌ ಬೋಧನಾ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲಾ ವೈದ್ಯರಿಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಸೂಚಿಸಿದ್ದಾರೆ. ಇದು ವಾರದಲ್ಲಿ ಎರಡನೇ ದಾಳಿ ಮತ್ತು ಈ ವರ್ಷದ ಮೂರನೇ ದಾಳಿ ಆಗಿದೆ.