Friday, 13th December 2024

ವಾಯುಪಡೆಯ ತರಬೇತಿ ನೆಲೆಯ ಮೇಲೆ ಬಂದೂಕುಧಾರಿಗಳ ದಾಳಿ

ಮಿಯಾನ್‌ವಾಲಿ: ನೆರೆಯ ದೇಶದ ಪಂಜಾಬ್ ಪ್ರಾಂತ್ಯದ ಮಿಯಾನ್‌ವಾಲಿ ತರಬೇತಿ ವಾಯುನೆಲೆ ಮೇಲೆ ಆರು ಉಗ್ರರು ದಾಳಿ ನಡೆಸಿದ್ದಾರೆ.

ದಾಳಿಕೋರರು ವಾಯುಪಡೆ ನೆಲೆ ಪ್ರವೇಶಿಸುವ ಮುನ್ನವೇ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ಪಾಕಿಸ್ತಾನದ ಮಿಯಾನ್‌ವಾಲಿಯಲ್ಲಿರುವ ವಾಯುಪಡೆ ಕೇಂದ್ರದ ಮೇಲೆ ಆತ್ಮಾಹುತಿ ದಾಳಿ ನಡೆದಿದೆ. ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅಪರಿಚಿತ ಬಂದೂಕುಧಾರಿಗಳು ವಾಯುಪಡೆ ತರಬೇತಿ ಕೇಂದ್ರಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭಯೋತ್ಪಾದಕರು ಮೂರು ಯುದ್ಧ ವಿಮಾನ ಗಳನ್ನು ಸ್ಫೋಟಿಸಿದ್ದು, ಹಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ ಹೊತ್ತುಕೊಂಡಿದೆ. ಮೂವರು ಭಯೋತ್ಪಾದಕರನ್ನು ಕೊಂದಿದ್ದೇವೆ ಮತ್ತು ಉಳಿದ ಮೂವರನ್ನು ತಟಸ್ಥಗೊಳಿಸಿದ್ದೇವೆ ಎಂದು ಪಾಕಿಸ್ತಾನಿ ವಾಯುಪಡೆ ಹೇಳಿಕೊಂಡಿದೆ.

ಅಪರಿಚಿತ ಬಂದೂಕುಧಾರಿಗಳ ವಿರುದ್ಧ ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಮೂವರು ಭಯೋ ತ್ಪಾದಕರನ್ನು ಹತ್ಯೆಗೈದಿರುವುದಾಗಿ ಪಾಕಿ ಸ್ತಾನ ವಾಯುಪಡೆ (ಪಿಎಎಫ್) ತಿಳಿಸಿದೆ. ಐದರಿಂದ ಆರು ಮಂದಿ ಭಾರಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ದಾಳಿ ನಡೆಸಿದ್ದು, ಶೂಟೌಟ್‌ಗೆ ಕಾರಣವಾಯಿತು. ಭಯೋತ್ಪಾದಕರು ವಾಯುನೆಲೆ ಪ್ರವೇಶಿಸುವ ಮೊದಲೇ ಅವರ ದಾಳಿಯನ್ನು ವಿಫಲಗೊಳಿಸಲಾಯಿತು ಎಂದು ಹೇಳಿದೆ.