Friday, 13th December 2024

ಪರ್ತ್‌’ನಲ್ಲಿ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು: 40 ಮನೆ ಸುಟ್ಟು ಭಸ್ಮ

ಪರ್ತ್(ಆಸ್ಟ್ರೇಲಿಯಾ): ಪಶ್ಚಿಮ ಕರಾವಳಿ ನಗರ ಪರ್ತ್‍ನ ಈಶಾನ್ಯಕ್ಕೆ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು  40 ಮನೆಗಳನ್ನು ಸುಟ್ಟು ಭಸ್ಮ ಮಾಡಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಅನೇಕ ಸ್ಥಳೀಯರುವ ಬೇರೆಡೆಗೆ ತೆರಳಲು ಸಿದ್ಧರಾಗಿದ್ದಾರೆ.

ಸೋಮವಾರ ಹೊತ್ತಿಕೊಂಡ ಕಾಡ್ಗಿಚ್ಚು 60 ಕಿಲೋ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ. ಮುಂಡರಿಂಗ್, ಚಿಟ್ಟರಿಂಗ್, ನಾರ್ಥಮ್ ಹಾಗೂ ಸ್ವಾನ್ ನಗರದ ಮೇಲೂ ಪ್ರಭಾವಬೀರಿದೆ.

ಪಶ್ಚಿಮ ಆಸ್ಟ್ರೇಲಿಯಾದ ಅಗ್ನಿ ಮತ್ತು ತುರ್ತು ಸೇವಾ ವರದಿ ಪ್ರಕಾರ 6667 ಹೆಕ್ಟೇರ್‍ಗಳಿಗೆ ಅಗ್ನಿ ವ್ಯಾಪಿಸಿದೆ. ವೂರುಲೂದಿಂದ ಪರ್ತನ ಈಶಾನ್ಯಕ್ಕೆ ವಲ್ಯುಂಗಾ ರಾಷ್ಟ್ರೀಯ ಉದ್ಯಾನವನದವರೆಗೆ ಪಶ್ಚಿಮಕ್ಕೆ 25 ಕಿ.ಮೀ. ವಿಸ್ತೀಣದಲ್ಲಿರುವ ಜನರು ತಮ್ಮ ಮನೆಗಳನ್ನು ತೊರೆಯುವುದು ಅಪಾಯ ಕಾರಿ.

ಆಸ್ಟ್ರೇಲಿಯಾದ ಆಗ್ನೇಯ ಕರಾವಳಿಯಲ್ಲಿ ಈ ಋತುವಿನಲ್ಲಿ ಯಾವುದೇ ಅಪಾಯವಿಲ್ಲ. ಇದು ಕಳೆದ ಬೇಸಿಗೆಯಲ್ಲಿ ಭಾರಿ ಬೆಂಕಿಯಿಂದ ನಾಶವಾಗಿತ್ತು ಎಂದು ತಿಳಿದುಬಂದಿದೆ.