Friday, 13th December 2024

ಇಂಗ್ಲೆಂಡ್‌ಗೆ ವಿಮಾನ ಸೇವೆ ಸ್ಥಗಿತಗೊಳಿಸಿದ ಫಿಲಿಫೈನ್ಸ್

ಮನಿಲಾ: ಏಷ್ಯಾದ ಹಲವು ರಾಷ್ಟ್ರಗಳು ಬ್ರಿಟನ್‌ಗೆ ವಿಮಾನ ಹಾರಾಟ ಸೇವೆ ನಿಲ್ಲಿಸಿದ್ದು, ಭಾರತದ ಬಳಿಕ ಫಿಲಿಪೈನ್ಸ್ ಕೂಡ ಇಂಗ್ಲೆಂಡ್‌ಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.

ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಇಂಗ್ಲೆಂಡ್‌ನಿಂದ ಬರುವ ಎಲ್ಲಾ ವಿಮಾನಗಳನ್ನು ನಿಷೇಧಿಸಿದ್ದಾರೆ ಎಂದು ಅವರ ವಕ್ತಾರರು ಬುಧವಾರ ಹೇಳಿದ್ದಾರೆ. ಯುರೋಪಿಯನ್ ರಾಷ್ಟ್ರವು ಹೆಚ್ಚು ಕೋವಿಡ್-19 ಸಾಂಕ್ರಾಮಿಕ ರೋಗದ ಒತ್ತಡವನ್ನು ಎದುರಿಸುತ್ತಿದೆ.

ಫಿಲಿಪೈನ್ಸ್‌ಗೆ ಇಂಗ್ಲೆಂಡ್‌ನ ಎಲ್ಲಾ ವಿಮಾನಗಳನ್ನು ಡಿ.24 ರಿಂದ ಡಿ.31 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧ್ಯಕ್ಷೀಯ ವಕ್ತಾರ ಹ್ಯಾರಿ ರೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ 14 ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿರುವ ತನ್ನ ಎಲ್ಲಾ ಫಿಲಿಫೈನ್ಸ್ ಪ್ರಯಾಣಿಕರಿಗೂ ಸಹ ತಾತ್ಕಾಲಿಕವಾಗಿ ಅದೇ ಅವಧಿಗೆ ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.