ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಎರಡು ತರಬೇತಿ ವಿಮಾನಗಳು ವಾಯು ಮಾರ್ಗ ಮಧ್ಯದಲ್ಲಿಯೇ ಡಿಕ್ಕಿ ಹೊಡೆದ ಪರಿಣಾಮ ಮೂವರು ಪೈಲಟ್ ಗಳು ಮೃತಪಟ್ಟು, ಓರ್ವ ಪೈಲಟ್ ಗಾಯಗೊಂಡಿದ್ದಾನೆ.
ದಕ್ಷಿಣ ಕೊರಿಯಾದ ಆಗ್ನೇಯ ನಗರವಾದ ಸಚೆನ್ ನಲ್ಲಿ ಕೆಟಿ-1 ವಿಮಾನಗಳ ನೆಲೆ ಬಳಿ ದುರ್ಘಟನೆ ಸಂಭವಿಸಿರುವುದಾಗಿ ವಾಯುಪಡೆ ತಿಳಿಸಿದೆ. ಘಟನೆಯಲ್ಲಿ ಮೃತಪಟ್ಟಿರು ವವರ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.
ಘಟನೆಯಲ್ಲಿ ಮೂವರು ಪೈಲಟ್ ಗಳು ಮೃತಪಟ್ಟಿರುವುದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಪೈಲಟ್ ಅನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ.
ಘಟನಾ ಸ್ಥಳಕ್ಕೆ 30ಕ್ಕೂ ಅಧಿಕ ಅಗ್ನಿಶಾಮಕ ದಳ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.