Friday, 13th December 2024

ಶರಣಾಗತನಾದ ಪೊಲೀಸ್ ಮುಖ್ಯಸ್ಥನ ಕೈಕಾಲು, ಕಣ್ಣಿಗೆ ಬಟ್ಟೆ ಕಟ್ಟಿ ಹತ್ಯೆ

ಕಾಬೂಲ್: ಅಫ್ಘಾನ್ ಯೋಧರಿಗೆ ಶರಣಾಗತನಾದ  ಪೊಲೀಸರನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಲ್ಲುವ ಮೂಲಕ ಭೀಕರತೆ ಸೃಷ್ಟಿಸಲಾಗಿದೆ.

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ತಾವು ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳಿಕೊಂಡಿದ್ದರು.

ಅಫ್ಗಾನಿಸ್ತಾನದ ಹೆರಾತ್ ಬಳಿಯ ಬದ್ಘಿಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಹಾಜಿ ಮುಲ್ಲಾರನ್ನು ಸೆರೆ ಹಿಡಿದಿದ್ದ ತಾಲಿಬಾನಿಗಳು ಮುಖ್ಯಸ್ಥನ ಕೈಕಾಲು, ಕಣ್ಣಿಗೆ ಬಟ್ಟೆ ಕಟ್ಟಿ ಮಂಡಿ ಮೇಲೆ ಕೂರಿಸಿ ಗುಂಡಿ ಮಳೆ ಸುರಿಸಿದ್ದಾರೆ. ಕಳೆದ ವಾರದ ಕೊನೆಯಲ್ಲಿ ತುರ್ಕಮೆನಿಸ್ತಾನ್ ಗಡಿಯ ಬಳಿ ತಾಲಿಬಾನ್ ಮಿಂಚಿನ ವೇಗದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡು, ಬದ್ಘಿಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರನ್ನು ಬಂಧಿಸಿತ್ತು.

ತಾಲಿಬಾನ್ ತನ್ನನ್ನು ಸುತ್ತುವರಿದಿದ್ದರಿಂದ ಮುಲ್ಲಾಗೆ ಶರಣಾಗುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ವರದಿಯಾಗಿದೆ.