Wednesday, 11th December 2024

Pro-Khalistan elements: ಗೋ ಬ್ಯಾಕ್‌ ಇಂಡಿಯಾ ಘೋಷಣೆ ಕೂಗಿದ ಖಲಿಸ್ತಾನಿಗಳು; ಕೆನಡಾ ವಿಪಕ್ಷ ನಾಯಕ ಖಂಡನೆ

pro Khalistan

ಟೊರೊಂಟೋ: ಕೆನಡಾದಲ್ಲಿ ಹಿಂದೂಗಳು ದೇಶ ಬಿಡುವಂತೆ ಖಲಿಸ್ತಾನಿ ಸಂಘಟನೆ(Pro-Khalistan elements) ಕರೆಕೊಟ್ಟಿವುದಕ್ಕೆ ಅಲ್ಲಿನ ವಿಪಕ್ಷ ನಾಯಕ ಪಿಯರೆ ಪೊಯ್ಲಿವ್ರೆ ಭಾರೀ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆನಡಾ ಪ್ರಧಾನಿ(Canada PM) ಜಸ್ಟಿನ್‌ ಟ್ರೂಡೋ(Justin Trudeau) ಸಮುದಾಯವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಶುಕ್ರವಾರ ಗ್ರೇಟರ್ ಟೊರೊಂಟೊ ಏರಿಯಾ ಅಥವಾ ಜಿಟಿಎಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಕನ್ಸರ್ವೇಟಿವ್ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ, ಹಿಂದೂಗಳಿಗೆ ಪೂಜಿಸುವ, ತಮ್ಮ ಕುಟುಂಬವನ್ನು ಬೆಳೆಸುವ, ಶಾಂತಿಯಿಂದ, ನಿರ್ಭೀತಿಯಿಂದ ಬದುಕುವ ಹಕ್ಕಿದೆ. ಅವರನ್ನು ಕೆನಡಾ ಬಿಟ್ಟು ತೆರಳುವಂತೆ ಆದೇಶಿಸಲು ಯಾರಿಗೂ ಅಧಿಕಾರ ಇಲ್ಲ. ಅದು ಸ್ವೀಕಾರಾರ್ಹ ಕ್ರಮವೂ ಅಲ್ಲ ಎಂದು ಗುಡುಗಿದ್ದಾರೆ.

ಇದೇ ವೇಳೆ ಅವರು ಟ್ರುಡೊ ಮೇಲೆ ದಾಳಿ ನಡೆಸಿದ್ದು, ಹಿಂದೂ ವಿರೋಧಿ ಅಜೆಂಡಾಗಳಿಗೆ ಕೆನಡಾದಲ್ಲಿ ಸ್ಥಾನವಿಲ್ಲ. ಪ್ರಧಾನಿಯವರು ನಮ್ಮ ಜನರನ್ನು ವಿಭಜಿಸಿರುವುದನ್ನು ನಾನು ಧಿಕ್ಕರಿಸುತ್ತೇನೆ. ನಾವು ಈ ದೇಶದಲ್ಲಿ ಒಂದಾಗಿ ಇದ್ದೇವು. ಈಗ ನೋಡಿ, ಎಲ್ಲರೂ ಜಗಳವಾಡುತ್ತಿದ್ದಾರೆ. ಕೆನಡಾದ ನಂಬಿಕೆ, ಸ್ವಾತಂತ್ರ್ಯ, ಕಠಿಣ ಪರಿಶ್ರಮ ಮತ್ತು ದೇಶಭಕ್ತಿಯ ಮೌಲ್ಯಗಳ ಸುತ್ತಲೂ ನಾವು ಜನರನ್ನು ಒಟ್ಟುಗೂಡಿಸಬೇಕು” ಎಂದು ಅವರು ಹೇಳಿದರು.

ಏನಿದು ಘಟನೆ?
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಇಂಡಿಯಾ ಡೇ ಪರೇಡ್‌ ಕಾರ್ಯಕ್ರಮದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು(Khalistan) ಭಾರತದ ತ್ರಿವರ್ಣ ಧ್ವಜವನ್ನು ಹರಿದಿರುವ ಘಟನೆ ಟೊರೊಂಟೋದಲ್ಲಿ ನಡೆದಿತ್ತು. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌(Viral Video) ಆಗಿತ್ತು. ಟೊರೊಂಟೋ ಸಿಟಿ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮದ ನಡುವೆ ಘೋಷಣೆ ಕೂಗುತ್ತಾ ಎಂಟ್ರಿಯಾದ ಖಲಿಸ್ತಾನಿಗಳು ಚಾಕುವಿನಿಂದ ಭಾರತದ ಧ್ವಜವನ್ನು ಹರಿದುಹಾಕಿದ್ದಾರೆ. ಅಲ್ಲದೇ ಗೋ ಬ್ಯಾಕ್‌ ಇಂಡಿಯಾ ಎಂದು ಘೋಷಣೆ ಕೂಗಿದ್ದರು.

ಪನೋರಮಾ ಇಂಡಿಯಾದ ಪರೇಡ್‌ನ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಾರಣ ಈ ವರ್ಷ ಈ ಕಾರ್ಯಕ್ರಮ ಬಹಳ ಮಹತ್ವ ಪಡೆದುಕೊಂಡಿತ್ತು. ಟೊರೊಂಟೊ ಡೌನ್‌ಟೌನ್‌ನಲ್ಲಿರುವ ನಾಥನ್ ಫಿಲಿಪ್ಸ್ ಸ್ಕ್ವೇರ್‌ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವೈವಿಧ್ಯಮಯ ಭಾರತೀಯ ತಿನಿಸುಗಳು ಕಾರ್ಯಕ್ರಮವನ್ನು ಹೆಚ್ಚಿಸಿದವು. ‘ಖಾಲಿಸ್ತಾನ್ ಸಿಖ್ಖರು’ ಮತ್ತು ‘ಕೆನಡಾದ ಹಿಂದೂಗಳ ನಡುವೆ ಮುಖಾಮುಖಿ’ಗಾಗಿ ಕರೆ ನೀಡುವ ಉದ್ದೇಶದಿಂದಲೇ ಸಮೀಪದಲ್ಲಿ ಖಲಿಸ್ತಾನಿಗಳು ಕಾರ್ಯಕ್ರಮ ಆಯೋಜಿಸಿತ್ತು.

ಕೆಲವು ದಿನಗಳ ಹಿಂದೆಯಷ್ಟೇ ಭಯೋತ್ಪಾದಕ ಚಟುವಟಿಕೆಗಳಿಗೆ ಮಾರಾಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾನ ಪ್ರಮುಖ ಸಹಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಬಂಧಿಸಿದೆ. ಮಾರಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದನಾ ಜಾಲವನ್ನು ಭೇದಿಸಿದ ಎನ್‌ಐಎ, ಮಧ್ಯಪ್ರದೇಶದ ಬದ್ವಾನಿ ಜಿಲ್ಲೆಯ ಬಲ್ಜೀತ್ ಸಿಂಗ್ ಅಲಿಯಾಸ್ ರಾಣಾ ಭಾಯ್ ಅಲಿಯಾಸ್ ಬಲ್ಲಿ ಎಂಬಾತನನ್ನು ಗುರುವಾರ ಪಂಜಾಬ್‌ನಲ್ಲಿ ಬಂಧಿಸಿದೆ.

ಈ ಸುದ್ದಿಯನ್ನೂ ಓದಿ: Khalistan: ಪಂಜಾಬ್ ಸಿಎಂ ಬಿಯಾಂತ್ ಸಿಂಗ್ ಕೊಲೆಗಾರನಿಗೆ ಖಲಿಸ್ತಾನಿಗಳಿಂದ ಗೌರವ