Wednesday, 11th December 2024

‘ಪ್ರೊಫೆಟ್ ಸಾಂಗ್‌’ ಕಾದಂಬರಿಗೆ ಬೂಕರ್ ಪ್ರಶಸ್ತಿ

ಲಂಡನ್​: ಐರಿಶ್ ಬರಹಗಾರ ಪಾಲ್ ಲಿಂಚ್ ಅವರು 2023ರ ಸಾಲಿನ ಬೂಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

‘ಪ್ರೊಫೆಟ್ ಸಾಂಗ್‌’ ಎಂಬ ಕಾದಂಬರಿಗೆ ಪ್ರತಿಷ್ಟಿಟ ಪ್ರಶಸ್ತಿ ಲಭಿಸಿದೆ. ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಹಾಗೂ 50,000 ಪೌಂಡ್ (63,000 ಡಾಲರ್) ನಗದು ನೀಡಿ ಗೌರವಿಸಲಾಯಿತು.

ಬೂಕರ್ ಪ್ರಶಸ್ತಿಗೆ 163 ಕಾದಂಬರಿಗಳು ಸ್ಪ್ರರ್ಧೆಯಲ್ಲಿದ್ದವು. ಇದರಲ್ಲಿ ಐರ್ಲೆಂಡ್, ಯುಕೆ, ಯುಎಸ್​ ಮತ್ತು ಕೆನಡಾದ ಐವರು ಬರಹಗಾರರ ಪುಸ್ತಕಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಪಾಲ್ ಲಿಂಚ್ ಅವರ ‘ಪ್ರೊಫೆಟ್ ಸಾಂಗ್‌’ ಕಾದಂಬರಿ ಲಂಡನ್ ಮೂಲದ ಭಾರತೀಯ ಮೂಲದ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ “ವೆಸ್ಟರ್ನ್ ಲೇನ್” ಹಿಂದಿಕ್ಕಿ ಪ್ರಶಸ್ತಿಗೆ ಆಯ್ಕೆಯಾಯಿತು.

ಸರ್ಕಾರ ದಬ್ಬಾಳಿಕೆಯಲ್ಲಿ ಸಾಗುತ್ತಿರುವಾಗ ದುರಂತದ ಅಂಚಿನಲ್ಲಿರುವ ಕುಟುಂಬ ಹಾಗೂ ದೇಶದ ಕಥೆಯನ್ನು ಈ ಕಾದಂಬರಿಯು ಹೇಳುತ್ತದೆ.

ಪ್ರಶಸ್ತಿ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಇ.ಸಿ.ಎಡುಗ್ಯಾನ್ ಮಾತನಾಡಿ, ‘ಪ್ರೊಫೆಟ್ ಸಾಂಗ್‌’ ಕಾದಂಬರಿ ನಮ್ಮ ಮನ ತಟ್ಟುವಂತಿದ್ದು, ಆತ್ಮಾವ ಲೋಕನಕ್ಕೆ ಪೂರಕವಾದ ಸಂಗತಿಗಳನ್ನು ತಿಳಿಸುತ್ತದೆ. ಐರ್ಲೆಂಡ್‌ನಲ್ಲಿ ಮಹಿಳೆಯೊಬ್ಬರು ತನ್ನ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಭಯಾ ನಕ ಸನ್ನಿವೇಶಗಳನ್ನು ಇದು ಒಳಗೊಂಡಿದೆ. ದೇಶದಲ್ಲಿ ದಬ್ಬಾಳಿಕೆಯ ಘಟನೆಗಳನ್ನು ಎಳೆಎಳೆಯಾಗಿ ಸಮಾಜದ ಮುಂದಿಡುವ ಕಾರ್ಯವನ್ನು ಲೇಖಕರು ಮಾಡಿದ್ದಾರೆ. ಈ ಕಾದಂಬರಿ ಭಾವನಾತ್ಮಕ ಕಥೆ ಒಳಗೊಂಡಿದ್ದು, ಧೈರ್ಯ ಮತ್ತು ಶೌರ್ಯದ ವಿಜಯವನ್ನು ವಿವರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಪಾಲ್​ ಲಿಂಚ್ ಬುಕರ್ ಪ್ರಶಸ್ತಿ ಗೆದ್ದ ಐದನೇ ಐರಿಶ್ ಲೇಖಕರಾಗಿದ್ದಾರೆ. ಉತ್ತರ ಐರಿಶ್​ನ ಬರಹಗಾರ ಅನ್ನಾ ಬರ್ನ್ಸ್ 2018ರಲ್ಲಿ ಈ ಪ್ರಶಸ್ತಿ ಪಡೆದಿದ್ದರು.