Friday, 13th December 2024

ಪ್ರಸಾರವಾಗದ ಪ್ರಧಾನಿ ಕಾರ್ಯಕ್ರಮ: 17 ಅಧಿಕಾರಿಗಳ ಅಮಾನತು

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಲಾಹೋರ್ ಭೇಟಿಯ ಕಾರ್ಯಕ್ರಮ ಪ್ರಸಾರ ಮಾಡುವಲ್ಲಿ ವಿಫಲರಾದ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಿಟಿವಿಯ 17 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಕಳೆದ ವಾರ ಲಾಹೋರ್‌ನ ಕೋಟ್ ಲಖ್ಪತ್ ಜೈಲು ಮತ್ತು ರಂಜಾನ್ ಬಜಾರ್‌ಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಪಿಟಿವಿಯ ಸಿಬ್ಬಂದಿ ಕಾರ್ಯಕ್ರಮವನ್ನು ಚಿತ್ರೀಕರಿಸಿ ಅದನ್ನು ಫೈಲ್ ಟ್ರಾನ್ಸ್ ಫರ್ ಪ್ರೋಟೋಕಾಲ್ ಮೂಲಕ ವೀಡಿಯೊ ತುಣುಕನ್ನು ಅಪ್‌ಲೋಡ್ ಮಾಡಲು ವಿಫಲರಾಗಿದ್ದರು. ಅಗತ್ಯವಾದ ಸುಧಾರಿತ ಲ್ಯಾಪ್‌ ಟಾಪ್ ಲಭ್ಯವಿಲ್ಲದ ಕಾರಣ ಈ ಸಮಸ್ಯೆ ಏರ್ಪಟ್ಟಿತ್ತು.

ಪಾಕಿಸ್ತಾನ ಟೆಲಿವಿಷನ್ ತಂಡವು ಸರಿಯಾದ ಪ್ರಸಾರವನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ ಎಂದು ಸಂಸ್ಥೆಯ 17 ಮಂದಿ ಸಿಬ್ಬಂದಿಗಳನ್ನು ಅಮಾನತು ಮಾಡಲಾ ಗಿದೆ.