Wednesday, 11th December 2024

ಭಾರಿ ಮಳೆಗೆ ಎರಡು ಭೂಕುಸಿತ: 11 ಸಾವು, 18 ಮಂದಿಗೆ ಗಾಯ

ಇಂಡೋನೇಷ್ಯಾ : ಜಕಾರ್ತಾದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಎರಡು ಭೂಕುಸಿತಗಳಲ್ಲಿ ಕನಿಷ್ಠ 11 ಮಂದಿ ಸಾವನ್ನ ಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ.

ಸುಮೇಡಾಂಗ್ ಜಿಲ್ಲೆಯ ಸಿಹಾಂಜುವಾಂಗ್ ಗ್ರಾಮದಲ್ಲಿ ಎರಡನೇ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ರಕ್ಷಣಾ ಸಿಬ್ಬಂದಿಯೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಶನಿವಾರ ರಾತ್ರಿ ಮಳೆ ನಿಂತಿತು. ಭೂಕುಸಿತದಿಂದ ಸೇತುವೆ ಮತ್ತು ರಸ್ತೆ ಗಳನ್ನು ಬಂದ್ ಮಾಡಲಾಗಿತ್ತು.

ಅಧಿಕಾರಿಗಳು ಅವಶೇಷಗಳನ್ನು ತೆರವುಗೊಳಿಸಲು ಭಾರಿ ಯಂತ್ರೋಪಕರಣಗಳನ್ನು ತರಲು ಹರಸಾಹಸ ಮಾಡಿದರು.