Saturday, 14th December 2024

ಇರಾನ್‌ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

ಟೆಹರಾನ್‌: ಇರಾನ್‌ ದೇಶದ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆಯಾಗಿದ್ದಾರೆ. ವಿದೇಶಾಂಗ ಸಚಿವ ಮೊಹಮ್ಮದ್ ಜಾವಾದ್ ಜರೀಫ್ ಶನಿವಾರ ರೈಸಿ ಅವರ ಆಯ್ಕೆಯನ್ನು ಘೋಷಿಸಿರು.

ರೈಸಿ ಅವರ ಪರ 1.78 ಕೋಟಿ ಮತಗಳು, ಪ್ರತಿಸ್ಪರ್ಧಿಯಾಗಿದ್ದ ಮೊಹಸೆನ್‌ ರೆಝಿ 33 ಲಕ್ಷ ಹಾಗೂ ಹೆಮ್ಮಟ್ಟಿ 24 ಲಕ್ಷ ಮತ ಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

60 ವರ್ಷದ ರೈಸಿ ಅವರು ಆಗಸ್ಟ್‌ನಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇರಾನ್‌ನ ಮುಖ್ಯ ನ್ಯಾಯಮೂರ್ತಿ ಯಾಗಿ ಇಬ್ರಾಹಿಂ ರೈಸಿ ಅವರು ಕಾರ್ಯನಿರ್ವಹಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಬಡವರಿಗೆ 40 ಲಕ್ಷ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರೈಸಿ ಭರವಸೆ ನೀಡಿದ್ದರು. ರೈಸಿ ಅವರ ಆಯ್ಕೆಗೆ ಇರಾನ್‌ ಹಾಲಿ ಅಧ್ಯಕ್ಷ ಹಸನ್‌ ರೌಹಾನಿ ಶುಭಾಶಯ ಕೋರಿದ್ದಾರೆ.

ಇಬ್ರಾಹಿಂ ರೈಸಿ ಅವರು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರ ಆಪ್ತರು ಕೂಡ ಆಗಿದ್ದಾರೆ.