Friday, 13th December 2024

ರಿಷಿ ಸುನಕ್ ಐದನೇ ಸುತ್ತಿನಲ್ಲಿ ಅಗ್ರಸ್ಥಾನಿ

ಲಂಡನ್‌: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಐದನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದು, 137 ಮತಗಳನ್ನು ಪಡೆದಿದ್ದಾರೆ.

ಐದನೇ ಸುತ್ತಿನ ಮತದಾನದಲ್ಲಿ 105 ಮತಗಳನ್ನ ಪಡೆದ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ ಪ್ರಧಾನಿ ರೇಸ್‌ನಿಂದ ಹೊರಗುಳಿದಿದ್ದಾರೆ. ಸುನಕ್, ಲಿಜ್ ಟ್ರಸ್ ಅವರನ್ನ ಎದುರಿಸಲಿದ್ದು, ಅವರು 113 ಮತಗಳನ್ನ ಪಡೆದಿದ್ದಾರೆ.

ಎಲ್ಲಾ ಐದು ಹಂತಗಳಲ್ಲಿ ರಿಷಿ ಸುನಕ್ ಅತಿ ಹೆಚ್ಚು ಮತಗಳನ್ನ ಪಡೆದಿದ್ದಾರೆ. ನಾಲ್ಕನೇ ಸುತ್ತಿನ ಮತದಾನದಲ್ಲಿ 118 ಮತಗಳನ್ನ ಪಡೆದರೆ, ಸೋಮವಾರ ನಡೆದ ಮೂರನೇ ಸುತ್ತಿನ ಮತದಾನದಲ್ಲಿ 115 ಮತಗಳನ್ನ ಪಡೆದಿದ್ದರು. ಎರಡನೇ ಸುತ್ತಿನಲ್ಲಿ 101 ಮತಗಳು ಹಾಗೂ ಮೊದಲ ಸುತ್ತಿನಲ್ಲಿ 88 ಮತಗಳು ಚಲಾವಣೆಯಾದವು. ಸುನಕ್ ಎಲ್ಲಾ ಹಂತಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟೋರಿ ಪಕ್ಷದ ಸದಸ್ಯತ್ವ ಬೇಸ್‌ಗೆ ಒಲವು ತೋರುವತ್ತ ಗಮನ ಹರಿಸಲಾಗುವುದು. ಈ ಸದಸ್ಯರ ಸಂಖ್ಯೆ ಸುಮಾರು 160,000 ಎಂದು ಅಂದಾಜಿಸಲಾಗಿದೆ. ಅವರು ಇಬ್ಬರು ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸುತ್ತಾರೆ. ಆ ಮತಗಳನ್ನ ಆಗಸ್ಟ್ ಅಂತ್ಯದಲ್ಲಿ ಎಣಿಕೆ ಮಾಡಲಾಗುವುದು ಮತ್ತು ಸೆಪ್ಟೆಂಬರ್ 5ರೊಳಗೆ ವಿಜೇತರನ್ನು ಘೋಷಿಸಲಾಗುತ್ತದೆ.