Wednesday, 11th December 2024

ರೈಲು ನಿಲ್ದಾಣಕ್ಕೆ ಅಪ್ಪಳಿಸಿದ ರಾಕೆಟ್‌: 30 ಮಂದಿ ಸಾವು

ಕೀವ್: ಪೂರ್ವ ಉಕ್ರೇನ್ ನಗರದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣಕ್ಕೆ ಶುಕ್ರವಾರ ಎರಡು ರಾಕೆಟ್‌ಗಳು ಅಪ್ಪಳಿಸಿದ್ದು 30 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಯುದ್ಧದ ನಡುವೆ ನಿವಾಸಿಗಳನ್ನು ಸ್ಥಳಾಂತರಿಸಲು ರೈಲು ನಿಲ್ದಾಣವನ್ನು ಬಳಸಲಾಗುತ್ತಿದ್ದ ವೇಳೆ ಈ ದಾಳಿ ನಡೆದಿದೆ.

ರಷ್ಯಾದ ಪಡೆಗಳಿಂದ ಬಾಂಬ್ ದಾಳಿಗೆ ಒಳಗಾದ ಪ್ರದೇಶಗಳಿಂದ ನಾಗರಿಕ ರನ್ನು ಸ್ಥಳಾಂತರಿಸಲು ಬಳಸಲಾಗುವ ಕ್ರಾಮಾಟೋರ್ಸ್ಕ್‌ನಲ್ಲಿರುವ ನಿಲ್ದಾಣಕ್ಕೆ ಎರಡು ಬಾರಿ ರಷ್ಯಾದ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಹೇಳಿದೆ.

ಕ್ರಾಮಾಟೋರ್ಸ್ಕ್ ರೈಲು ನಿಲ್ದಾಣದ ಮೇಲಿನ ರಾಕೆಟ್ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ರೈಲ್ವೆ ತಿಳಿಸಿದೆ. ಫೆಬ್ರವರಿ 24 ರಂದು ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ಇಂದಿಗೂ ದಾಳಿ ಮುಂದುವರೆಸಿದೆ.