ಮಾಸ್ಕೋ: ಮಾಧ್ಯಮ ಲೋಕದ ದಿಗ್ಗಜ ರೂಪರ್ಟ್ ಮುರ್ಡೋಕ್ 92ರ ಇಳಿ ವಯಸ್ಸಿನಲ್ಲಿ ಮದುವೆಯಾಗಲಿದ್ದಾರೆ.
ಮಾಸ್ಕೋ ನಿವಾಸಿ 67 ವರ್ಷದ ಎಲೆನಾ ಝುಕೋವಾ ಅವರನ್ನು ಮದುವೆಯಾಗಲಿದ್ದಾರೆ. ಇದು ಇವರ ಐದನೇ ಮದುವೆ ಎಂದು ತಿಳಿದು ಬಂದಿದೆ.
ಎಲೆನಾ ಝುಕೋವಾ ಅವರೊಂದಿಗೆ ಮುರ್ಡೋಕ್ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ. ಎಲೆನಾ ಝುಕೋವಾ ಅವರು ಆಣ್ವಿಕ ಜೀವಶಾಸ್ತ್ರಜ್ಞರ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಕಳೆದ ಬೇಸಿಗೆಯಿಂದಲೂ ಇವರಿಬ್ಬರ ನಡುವೆ ಮೀಟಿಂಗ್ ನಡೆಯು ತ್ತಿತ್ತು. ಅವರನ್ನು ರೂಪರ್ಟ್ ಮುರ್ಡೋಕ್ ಅವರ ಮೂರನೇ ಪತ್ನಿ ವೆಂಡಿ ಡೆಂಗ್ ಪರಿಚಯಿಸಿದರು.
1956ರಲ್ಲಿ ರೂಪಾರ್ಟ್ ಮುರ್ಡೋಕ್ ಮೊದಲ ಬಾರಿ ವಿವಾಹ ಆಗಿದ್ದರು. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿವಾಸಿ ಪಟ್ರಿಸಿಯಾ ಬೂಕರ್ ಅವರನ್ನ ವಿವಾಹವಾಗಿದ್ದರು. ಆಕೆ ವೃತ್ತಿಯಲ್ಲಿ ಗಗನಸಖಿ ಆಗಿದ್ದರು. 1967ರಲ್ಲಿ ವಿವಾಹ ವಿಚ್ಛೇದನ ಪಡೆದಿದ್ದರು. 1967ರಲ್ಲಿ ಸ್ಕಾಟ್ಲೆಂಡ್ ಮೂಲದ ಸಿಡ್ನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತೆ ಅನ್ನಾ ತೊರ್ವ್ ಅವರನ್ನು ರೂಪಾರ್ಟ್ ಮುರ್ಡೋಕ್ ವಿವಾಹ ಆಗಿದ್ದರು. 1999ರಲ್ಲಿ ಅನ್ನಾಗೆ 1.2 ಬಿಲಿಯನ್ ಮೊತ್ತದ ಪರಿಹಾರವನ್ನು ನೀಡಿ ಡಿವೋರ್ಸ್ ಪಡೆದಿದ್ದರು.
ಅನ್ನಾ ಡೈವೋರ್ಸ್ ಕೊಟ್ಟ 17 ದಿನಕ್ಕೇ ಮತ್ತೊಂದು ಮದುವೆಯಾದ ರೂಪಾರ್ಟ್ ಮುರ್ಡೋಕ್, ಚೀನಾ ಮೂಲದ ವೆಂಡಿ ಡೆಂಗ್ ಅವರನ್ನು ವಿವಾಹ ವಾದರು. 2013ರಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದರು. 2016ರಲ್ಲಿ ರೂಪಾರ್ಟ್ ಮುರ್ಡೋಕ್ ಅವರು ರೂಪದರ್ಶಿ ಜೆರ್ರಿ ಹಾಲ್ ಅವರನ್ನು ಮದುವೆ ಯಾದರು. 2022ರಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದರು.
ತಮ್ಮ ನಾಲ್ವರು ಪತ್ನಿಯರಿಂದ 6 ಮಕ್ಕಳನ್ನು ರೂಪಾರ್ಟ್ ಮುರ್ಡೋಕ್ ಪಡೆದಿದ್ದಾರೆ. ಎಲ್ಲಾ ಮಕ್ಕಳಿಗೂ ತಮ್ಮ ಮಾಲೀಕತ್ವದ ಮಾಧ್ಯಮ ಸಂಸ್ಥೆ ಗಳ ಮುಖ್ಯಸ್ಥರ ಹುದ್ದೆಗಳನ್ನು ನೀಡಿದ್ದಾರೆ. ರೂಪಾರ್ಟ್ ಮುರ್ಡೋಕ್ ಅವರು ಭಾರತ ಸೇರಿದಂತೆ ವಿಶ್ವದ ಮೂರು ಖಂಡಗಳಲ್ಲಿ ಮಾಧ್ಯಮ ಲೋಕ ದಲ್ಲಿ ತಮ್ಮ ವರ್ಚಸ್ಸು ಹೊಂದಿದ್ದಾರೆ. ಸ್ಟಾರ್ ಟಿವಿ, ಫಾಕ್ಸ್ ನ್ಯೂಸ್, ನ್ಯೂಯಾರ್ಕ್ ಪೋಸ್ಟ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳ ಒಡೆಯರಾಗಿ ದ್ದಾರೆ.