Wednesday, 11th December 2024

ವಿಕೃತಕಾಮಿ ಇಸ್ಸೆ ಸಗಾವಾ ನಿಧನ

ಜಪಾನ್‌: ಚ್ ವಿದ್ಯಾರ್ಥಿ ಕೊಂದು, ಅತ್ಯಾಚಾರ ಎಸಗಿ, ದೇಹದ ಭಾಗಗಳನ್ನು ತಿಂದಿದ್ದ ಜಪಾನಿನ ನರಭಕ್ಷಕ, ವಿಕೃತಕಾಮಿ ಇಸ್ಸೆ ಸಗಾವಾ (73) ಇಹಲೋಕ ತ್ಯಜಿಸಿದ್ದಾನೆ.

ಪಾತಕಿಗಳ ಲೋಕದಲ್ಲಿ ಸಗಾವನಿಗೆ ಬಹಳಷ್ಟು ಕುಖ್ಯಾತಿ.  ಆತ ʼಕೋಬ್ ಕ್ಯಾನಿಬಾಲ್ʼ (ನರಭಕ್ಷಕ) ಎಂದು ಕರೆಸಿಕೊಳ್ಳುತ್ತಿದ್ದ. ಚಿಕ್ಕವಯಸ್ಸಿನಿಂದಲೇ ನರಭಕ್ಷಣೆಯ ಕುರಿತು ಸೆಳೆತ ಹೊಂದಿದ್ದ ಸಗಾವ ತನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಆಸೆಯನ್ನು ಕಾರ್ಯರೂಪಕ್ಕೆ ತಂದಿದ್ದು 1981 ರಲ್ಲಿ. ಆಗ 28 ವರ್ಷದವನಾಗಿದ್ದ ಸಾಗವಾ ಪ್ಯಾರಿಸ್‌ನ ಪ್ರತಿಷ್ಠಿತ ಸರ್ಬೋನೆ ಯೂನಿವರ್ಸಿಟಿ ಯಲ್ಲಿ ಪಾಶ್ಚಾತ್ಯ ಭಾಷೆಗಳ ಅಧ್ಯಯನ ಮಾಡುತ್ತಿದ್ದಾಗ ಪರಿಚಯವಾಗಿದ್ದ ಡಚ್ ವಿದ್ಯಾರ್ಥಿ ರೆನೀ ಹಾರ್ಟೆವೆಲ್ಟ್ ಅವರನ್ನು ತನ್ನ ಅಪಾರ್ಟ್‌ ಮೆಂಟ್‌ ಗೆ ಆಹ್ವಾನಿಸಿದ್ದ.

ರೆನೀ ಹಾರ್ಟೆವೆಲ್ಟ್‌ಳ ಕುತ್ತಿಗೆಗೆ ಗುಂಡು ಹಾರಿಸಿ ಕೊಂದಿದ್ದ ಸೆಗಾವಾ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ. ಆ ಬಳಿಕ ಆಕೆಯ ದೇಹದ ಭಾಗಗಳನ್ನು ಕತ್ತರಿಸಿ ಹಲವಾರು ದಿನಗಳ ಕಾಲ ಅವಳ ದೇಹದ ಭಾಗಗಳನ್ನು ಸೇವಿಸಿದ್ದ.

ಆ ಬಳಿಕ ಆಕೆಯ ದೇಹದ ಅಳಿದುಳಿದ ಭಾಗಗಳನ್ನು ಪ್ಯಾರೀಸ್‌ ನ ಬೋಯಿಸ್ ಡಿ ಬೌಲೋಗ್ನೆ ಉದ್ಯಾನವನದಲ್ಲಿ ವಿಲೇವಾರಿ ಮಾಡಲು ಪ್ರಯತ್ನಿಸುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಆತನ ನರಭಕ್ಷಣೆಯ ಸುದ್ದಿ ಜಗತ್ತಿನಲ್ಲೆಲ್ಲ ದೊಡ್ಡ ಸುದ್ದಿಯಾಗಿತ್ತು. ಆದರೆ ತೀರ ಅಚ್ಚರಿಯ ವಿಚಾರವೆಂದರೆ ಆತನಿಗೆ ಈ ಕೃತ್ಯಕ್ಕೆ ಒಂದು ಚೂರೂ ಶಿಕ್ಷೆಯಾಗಲಿಲ್ಲ. ಆಗರ್ಭ ಶ್ರೀಮಂತನಾಗಿದ್ದ ಸೆಗಾವ ತಂದೆ ಪೊಲೀಸರಿಗೆ ದಾರಾಳ ದುಡ್ಡು ಸುರಿದು ಸೆಗಾವನನ್ನು ವಿಚಾರಣೆಯಿಲ್ಲದೆ ಮರಳಿ ಜಪಾನಿಗೆ ಕರೆತಂದಿದ್ದ.

ಮಾನಸಿಕ ರೋಗಿ ಎಂದು ಶರಾ ಬರೆದಿದ್ದ ಫ್ರೆಂಚ್ ವೈದ್ಯಕೀಯ ತಜ್ಞರು ಆತ ವಿಚಾರಣೆಗೆ ಅನರ್ಹರೆಂದು ಪರಿಗಣಿಸಿದರು.

1984 ರಲ್ಲಿ ಆತನನ್ನು ಜಪಾನ್‌ಗೆ ಗಡೀಪಾರು ಮಾಡಲಾಗಿತ್ತು. ಈತನ ಅಪರಾಧ ಕೃತ್ಯದ ಫೈಲ್‌ಗಳನ್ನು ಸಹ ಫ್ರೆಂಚ್‌ ಅಧಿಕಾರಿಗಳು ಜಪಾನ್‌ಗೆ ಕಳುಹಿಸುವುದಿಲ್ಲ. ಆದ್ದರಿಂದ ಸೆಗಾವ ಜಪಾನ್‌ನಲ್ಲಿ ಸರ್ವ ಸ್ವತಂತ್ರವಾಗಿರಲು ಓಡಾಡಿಕೊಂಡಿದ್ದ.
ಸಾಗಾವಾ ತನ್ನ ಕುಖ್ಯಾತಿಯನ್ನು ಬಂಡವಾಳ ಮಾಡಿಕೊಂಡು 20 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಅಪಾರ ಪ್ರಖ್ಯಾತಿ ಗಳಸಿದ. “ಇನ್ ದಿ ಫಾಗ್” ಎಂಬ ಕಾದಂಬರಿ ಅವನ ನರಭಕ್ಷಣೆ ಕತೆಯನ್ನೇ ಹೊಂದಿತ್ತು!

1982 ರಲ್ಲಿ ಸಾಹಿತ್ಯ ಪ್ರಶಸ್ತಿ ಗೆದ್ದ ಜಪಾನಿನ ಕಾದಂಬರಿಕಾರ ಜೂರೋ ಕಾರಾ ಅವರ “ಲೆಟರ್ ಫ್ರಮ್ ಸಾಗವಾ-ಕುನ್” ಕಾದಂಬರಿಯ ವಿಷಯವೂ ಈ ಕೊಲೆಯಾಗಿದೆ.