Friday, 13th December 2024

ಪಿಕಪ್ ವಾಹನ ಡಿಕ್ಕಿ: ಭಾರತೀಯ ವಿದ್ಯಾರ್ಥಿ ಸಾವು

ಕೆನಡಾ: ಸೈಕಲ್ ನಲ್ಲಿ ರಸ್ತೆ ದಾಡುತ್ತಿದ್ದ ವೇಳೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಭಾರತೀಯ ವಿದ್ಯಾರ್ಥಿ  ಮೃತಪಟ್ಟಿದ್ದಾನೆ.

ಮೃತ ವಿದ್ಯಾರ್ಥಿಯನ್ನು ಕಾರ್ತಿಕ್ ಸೈನಿ ಎಂದು ಗುರುತಿಸಲಾಗಿದೆ. 2021ರ ಆಗಸ್ಟ್‌ನಲ್ಲಿ ಭಾರತದಿಂದ ಕೆನಡಾಕ್ಕೆ ತೆರಳಿದ್ದರು. ಕಾರ್ತಿಕ್ ಅವರ ಕುಟುಂಬವು ಹರಿಯಾಣದ ಕರ್ನಾಲ್‌ ನಲ್ಲಿ ನೆಲೆಸಿದೆ ಎಂದು ತಿಳಿದು ಬಂದಿದೆ.

ಕಾರ್ತಿಕ್ ಕೆನಡಾದ ಶೆರಿಡನ್ ಕಾಲೇಜಿನಲ್ಲಿ ದಾಖಲಾಗಿದ್ದಾನೆ. ಕಾರ್ತಿಕ್ ಅವರ ಸಾವು ಸಮುದಾಯದ ನಡುವೆ ಅತೀವ ದುಃಖವನ್ನು ಉಂಟುಮಾಡಿದೆ, ಅವರ ಕುಟುಂಬ, ಸ್ನೇಹಿತರು, ಸಹಪಾಠಿಗಳು ಮತ್ತು ಶಿಕ್ಷಕರಿಗೆ ಆಳವಾದ ಸಹಾನುಭೂತಿಯನ್ನು ವ್ಯಕ್ತಪಡಿ ಸಿದೆ ಎಂದು ಕಾಲೇಜು ಮಂಡಳಿ ಇಮೇಲ್‌ ಮೂಲಕ ತಿಳಿಸಿದೆ.

ಕಾರ್ತಿಕ್ ಅತ್ಯಂತ ಸಭ್ಯ ಸ್ವಭಾವದವ ಎಂದು ಎಂದು ಸೋದರ ಸಂಬಂಧಿ ತಿಳಿಸಿದ್ದು, ಮಗನ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಹಿಂದಿರುಗಿಸಬೇಕೆಂದು ಕುಟುಂಬ ಮನವಿ ಮಾಡಿದೆ.