Saturday, 14th December 2024

ಮೈಕ್ರೊಸಾಫ್ಟ್ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಆಯ್ಕೆ

ನವದೆಹಲಿ : ಮೈಕ್ರೊಸಾಫ್ಟ್ ಕಾರ್ಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರನ್ನು ಜಾನ್ ಥಾಂಪ್ಸನ್ ಬದಲಿಗೆ ತನ್ನ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಬಾಲ್ಮರ್ ಅವರಿಂದ 2014 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಾಡೆಲ್ಲಾ, ಲಿಂಕ್ಡ್ ಇನ್, ನ್ಯೂನ್ಸ್ ಕಮ್ಯುನಿಕೇಷನ್ಸ್ ಮತ್ತು ಜೆನಿಮ್ಯಾಕ್ಸ್ ನಂತಹ ಬಿಲಿಯನ್ ಡಾಲರ್ ಸ್ವಾಧೀನಗಳು ಸೇರಿದಂತೆ ತನ್ನ ವ್ಯವಹಾರ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ.

2014 ರಲ್ಲಿ ಸಾಫ್ಟ್ ವೇರ್ ದೈತ್ಯನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಂದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಥಾಂಪ್ಸನ್ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಕಂಪನಿ ಹೇಳಿದೆ.