Saturday, 14th December 2024

ಸೌದಿಯಲ್ಲಿ ಮಾ.31ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಪುನರಾರಂಭ

ದುಬೈ: ತಾತ್ಕಾಲಿಕ ಪ್ರಯಾಣ ನಿಷೇಧ ಹಿಂಪಡೆದುಕೊಂಡು ಎಲ್ಲಾ ಅಂತರ್ ರಾಷ್ಟ್ರೀಯ ವಿಮಾನಯಾನಗಳನ್ನು ಪುನರಾ ರಂಭಿಸುವುದಾಗಿ ಸೌದಿ ಅರೇಬಿಯ ಘೋಷಿಸಿದೆ.  ಮಾರ್ಚ್ 31, 2021ರಂದು ಜಾರಿಗೆ ಬರಲಿರುವ ಈ ಕ್ರಮವು ಈ ಕೆಳಗಿನ ಕ್ರಮಗಳನ್ನು ಒಳಗೊಂಡಿದೆ.

1.ನಾಗರಿಕರಿಗೆ ಸೌದಿಯಿಂದ ಹೊರಗೆ ಪ್ರಯಾಣಿಸಲು ಹಾಗೂ ಹಿಂತಿರುಗಲು ಅವಕಾಶವಿರುತ್ತದೆ.

2. ಅಂತರ್ ರಾಷ್ಟ್ರೀಯ ವಿಮಾನಗಳ ಮೇಲಿನ ತಾತ್ಕಾಲಿಕ ನಿಷೇಧ ತೆಗೆದುಹಾಕಲಾಗುವುದು.

3.ಎಲ್ಲ ವಾಯು, ಜಲ ಹಾಗೂ ಭೂ ಗಡಿಗಳು ಮತ್ತೆ ತೆರೆಯಲ್ಪಡುತ್ತವೆ.

ಸೌದಿಯಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಮುನ್ನಚ್ಚರಿಕೆ ಕ್ರಮಗಳ ಮಧ್ಯೆ ಸಂಬಂಧ ಪಟ್ಟ ಸಮಿತಿಯು ನಿಗದಿಪಡಿಸಿದ ಕಾರ್ಯವಿಧಾನಗಳು ಹಾಗೂ ಮುನ್ನೆಚ್ಚರಿಕೆಗಳಿಗೆ ಅನುಗುಣವಾಗಿ ಮೇಲೆ ತಿಳಿಸಲಾದ ಕ್ರಮಗಳ ಅನುಷ್ಠಾನವನ್ನು ಮಾಡಲಾಗುವುದು ಎಂದು ತಿಳಿಸಲಾಗಿದೆ.