Wednesday, 24th April 2024

ಕೋಳಿಗಳ ಹೆದರಿಸಿ ಸಾಯಿಸಿದ ಆರೋಪ: ಚೀನಾದ ವ್ಯಕ್ತಿಗೆ ಜೈಲು ಶಿಕ್ಷೆ

ಶಾಂಘೈ: ತನ್ನ ನೆರೆಯವರಿಗೆ ಸೇರಿದ 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ಆರೋಪದ ಮೇಲೆ ಚೀನಾದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ಕೌಂಟಿಯ ನ್ಯಾಯಾಲಯವು ಝಾಂಗ್‌ಗೆ ಉದ್ದೇಶಪೂರ್ವಕವಾಗಿ ಆಸ್ತಿ ನಷ್ಟವನ್ನು ಉಂಟುಮಾಡಿದೆ ಎಂದು ತೀರ್ಪು ನೀಡಿದೆ.

ವಿಲಕ್ಷಣ ಕೃತ್ಯವು ತನ್ನ ನೆರೆಹೊರೆಯವರ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಜನೆಯ ಒಂದು ಭಾಗವಾಗಿತ್ತು ಎನ್ನಲಾಗಿದೆ. ನೆರೆಮನೆಯ ಝಾಂಗ್ ಅನುಮತಿಯಿಲ್ಲದೇ ಕತ್ತರಿ ಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಗು, ತನ್ನ ನೆರೆಮನೆಯ ಝಾಂಗ್‍ನ ಕೋಳಿ ಫಾರ್ಮ್‍ಗೆ ನುಸಿಳಿ, ಅಲ್ಲಿದ್ದ ಅಲ್ಲಿ ಬ್ಯಾಟರಿ ದೀಪಗಳನ್ನು ಬಳಸಿ ಕೋಳಿಗಳನ್ನು ಭಯ ಭೀತಗೊಳಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಅಲ್ಲಿದ್ದ 460 ಕೋಳಿಗಳು ಹೆದರಿ ಮೃತಪಟ್ಟಿದ್ದಾವೆ ಎನ್ನಲಾಗಿದೆ. 1,100 ಸತ್ತ ಕೋಳಿಗಳು ಸುಮಾರು 13,840 ಯುವಾನ್ (ರೂ. 1,64,855) ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ

error: Content is protected !!