Wednesday, 11th December 2024

ದೇವಾಲಯಗಳ ಮೇಲೆ ಯಾವುದೇ ಧರ್ಮದವರಿಂದ ದಾಳಿಯಾದರೆ ಶಿಕ್ಷೆ ಖಚಿತ: ಶೇಖ್ ಹಸೀನಾ

 ಢಾಕಾ: ಹಿಂದೂ ದೇವಾಲಯಗಳು ಮತ್ತು ದುರ್ಗಾ ಪೂಜಾ ಪೆಂಡಾಲ್ ಗಳ ಮೇಲೆ ದಾಳಿ ನಡೆಸಿ ವಿಧ್ವಂಸಕ ಕೃತ್ಯ ಎಸಗಿದ ಘಟನೆಯಲ್ಲಿ ಶಾಮೀಲಾ ದವರನ್ನು ಅವರು ಯಾವುದೇ ಧರ್ಮದವರಿರಲಿ ತಕ್ಕ ಶಿಕ್ಷೆ ವಿಧಿಸ ಲಾಗುವುದು ಎಂದು ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ತಿಳಿಸಿದ್ದಾರೆ.

ಕೊಮಿಲ್ಲಾದಲ್ಲಿ ನಡೆದ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಇದರಲ್ಲಿ ಧರ್ಮದ ವಿಚಾರವೂ ಇಲ್ಲ. ಆರೋಪಿಗಳು ಯಾರು ಎಂದು ಪತ್ತೆ ಹಚ್ಚಿ ಶಿಕ್ಷೆ ನೀಡುವು ದಾಗಿ ಹಸೀನಾ ಅವರು ತಿಳಿಸಿರುವುದಾಗಿ ವರದಿಯಾಗಿದೆ.

ಢಾಕಾದಲ್ಲಿರುವ ಢಾಕೇಶ್ವರಿ ನ್ಯಾಶನಲ್ ಟೆಂಪಲ್ ನಲ್ಲಿ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ಹಿಂದೂ ಸಮು ದಾಯದವರಿಗೆ ಶುಭಾಶಯ ಕೋರಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

ಕೊಮಿಲ್ಲಾದಲ್ಲಿ ದೇವಸ್ಥಾನಗಳನ್ನು ಒಡೆದ ಘಟನೆ ನಿಜಕ್ಕೂ ದುರದೃಷ್ಟಕರ ಎಂದು ಹೇಳಿದರು. ಯಾರು ಈ ಘಟನೆಗೆ ಕಾರಣರಾಗಿದ್ದಾರೋ ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು ಎಂದು ಹೇಳಿದರು.