ಢಾಕಾ: ಬಾಂಗ್ಲಾದೇಶದಲ್ಲಿ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿಲೀಗ್ ಪಕ್ಷ ನಿಷೇಧಿಸುವ ಉದ್ದೇಶ ಹೊಂದಿಲ್ಲ ಎಂದು ಆ ದೇಶದ ಮಧ್ಯಂತರ ಸರ್ಕಾರದ ಗೃಹ ಸಚಿವ ಸಖಾವತ್ ಹೊಸೈನ್ ತಿಳಿಸಿದರು.
ಅವಾಮಿ ಲೀಗ್ ಪಕ್ಷ ಮತ್ತು ಹಸೀನಾ ಅವರು ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದು, ಇದನ್ನು ಯಾರೂ ನಿರಾಕರಿಸಲಾಗದು. ಮುಂದೆ ಚುನಾವಣೆ ನಡೆದಾಗ ಅವರು ಮತ್ತು ಅವರ ಪಕ್ಷ ಸ್ಪರ್ಧಿಸಬೇಕು ಎಂದರು.
ಪಕ್ಷವು ಬಾಂಗ್ಲಾದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ – ಇದನ್ನು ನಾವು ನಿರಾಕರಿಸುವುದಿಲ್ಲ’ ಎಂದು ಸಖಾವತ್ ಹೊಸೈನ್ ಸುದ್ದಿಗಾರರಿಗೆ ತಿಳಿಸಿ ದರು. ‘ಚುನಾವಣೆ ಬಂದಾಗ, (ಅವರು) ಚುನಾವಣೆಗೆ ಸ್ಪರ್ಧಿಸಬೇಕು.’
ಬಾಂಗ್ಲಾದಲ್ಲಿ ಮೀಸಲಾತಿ ಹೋರಾಟ ಪ್ರತಿಭಟನೆಗಳು ಕೈ ಮೀರಿದ ಪರಿಣಾಮ ಹಸೀನಾ ವಾರದ ಹಿಂದೆ ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಬಂದರು. ಅವರ ಮನೆ ಲೂಟಿಯಾಗಿದ್ದು, ಅವರ ಕಾರ್ಯಕರ್ತರು, ಹಿಂದೂಗಳನ್ನು ಪ್ರತಿಭಟನಾಕಾರರು ಹತ್ಯೆಗೈದಿದ್ದು ತಿಳಿದ ಸಂಗತಿಯೇ.
42 ಪೊಲೀಸರು ಮತ್ತು ಅಧಿಕಾರಿಗಳು ಹಿಂಸಾಚಾರದಲ್ಲಿ ಬಲಿಯಾದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಗೈರಾಗುವುದಾಗಿ ತಿಳಿಸಿದ್ದ ಹಿನ್ನೆಲೆಯಲ್ಲಿ ಮಧ್ಯಂತರ ಸರ್ಕಾರ ಭಾನುವಾರ ತ್ರಿಯ ಮಾತುಕತೆ ನಡೆಸಿದ ನಂತರ ಕರ್ತವ್ಯಕ್ಕೆ ಮರಳಲು ಒಪ್ಪಿಕೊಂಡರು. ಸೋಮವಾರ ಢಾಕಾದ ರಸ್ತೆಗಳಲ್ಲಿ ಗಸ್ತು ಪ್ರಾರಂಭಿಸಿದರು.