Friday, 13th December 2024

ಪ್ರತಿಭಟನೆ: ದ್ವೀಪರಾಷ್ಟ್ರದಲ್ಲಿ ಸಾಮಾಜಿಕ ಮಾಧ್ಯಮ ಬ್ಯಾನ್

ಕೋಲಂಬೋ: ತೀವ್ರ ವಿದ್ಯುತ್ ಬಿಕ್ಕಟ್ಟು ಮತ್ತು ಹಣದುಬ್ಬರ ಎದುರಿಸು ತ್ತಿರುವ ದೇಶಾದ್ಯಂತ ಪ್ರತಿಭಟನೆಗಳ ಮಧ್ಯೆ ಶ್ರೀಲಂಕಾ ಸರ್ಕಾರವು ರಾಷ್ಟ್ರ ವ್ಯಾಪಿ ಸಾಮಾಜಿಕ ಮಾಧ್ಯಮವನ್ನು ನಿರ್ಬಂಧಿಸಿದೆ.

ಶ್ರೀಲಂಕಾದಲ್ಲಿ ಸೋಮವಾರದವರೆಗೆ 36 ಗಂಟೆಗಳ ಕರ್ಫ್ಯೂ ಘೋಷಿಸಿದ ನಂತರ ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸ್‌ಆಪ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸ ಲಾಗಿದೆ.

ರಿಯಲ್ ಟೈಮ್ ನೆಟ್‌ವರ್ಕ್ ಡೇಟಾ ಶೋ ಶ್ರೀಲಂಕಾವು ರಾಷ್ಟ್ರವ್ಯಾಪಿ ಸಾಮಾಜಿಕ ಮಾಧ್ಯಮ ಬ್ಲ್ಯಾಕ್‌ಔಟ್ ಅನ್ನು ವಿಧಿಸಿದೆ. ವ್ಯಾಪಕ ಪ್ರತಿಭಟನೆಗಳ ನಡುವೆ ತುರ್ತು ಪರಿಸ್ಥಿತಿ ಘೋಷಿಸಿರುವುದರಿಂದ ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸ್‌ಆಪ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಮ್ ಸೇರಿದಂತೆ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿದೆ.

ಶುಕ್ರವಾರ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಶ್ರೀಲಂಕಾದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾರ್ವಜನಿಕ ತುರ್ತು ಪರಿಸ್ಥಿತಿ  ಘೋಷಿಸುವ ಅಸಾಮಾನ್ಯ ಗೆಜೆಟ್ ಅನ್ನು ಬಿಡುಗಡೆ ಮಾಡಿದರು. ಶನಿವಾರ ಸಂಜೆ 6 ಗಂಟೆಯಿಂದ ಸೋಮವಾರ (ಏಪ್ರಿಲ್ 4) ಬೆಳಗ್ಗೆ 6 ಗಂಟೆಯವರೆಗೆ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ.