Saturday, 14th December 2024

ರಷ್ಯಾದಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂಗೆ ನಿಷೇಧ

ಮಾಸ್ಕೋ: ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂಗಳನ್ನು ದೇಶದಲ್ಲಿ ಬಳಸದಂತೆ ರಷ್ಯಾ ನ್ಯಾಯಾ ಲಯ ನಿಷೇಧ ಹೇರಿದೆ.

ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಹರಿದಾಡುತ್ತಿದ್ದ ನಕಲಿ ಸುದ್ದಿ ಗಳು ಮತ್ತು ರಷ್ಯಾದಲ್ಲಿನ ಆಂತರಿಕ ಪ್ರತಿಭಟನೆಗಳ ಕುರಿತಾದ ಸುದ್ದಿಗಳನ್ನು ನಿರ್ಬಂಧಿಸು ವಂತೆ ಸರ್ಕಾರವು ಮನವಿ ಮಾಡಿತ್ತು. ಆದರೆ ರಷ್ಯಾ ಮನವಿಗೆ ಅವೆರಡೂ ಸಂಸ್ಥೆಗಳು ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ ಎರಡೂ ಸಂಸ್ಥೆಗಳನ್ನು ನಿರ್ಬಂಧಿಸ ಲಾಗಿತ್ತು.

ದೇಶದ ಭದ್ರತೆ ದೃಷ್ಟಿಯಿಂದ ನಿಷೇಧ ಸೂಕ್ತ ಎಂದಿದೆ. ಇದರ ಜೊತೆಗೆ ಕೆಲ ವಿದೇಶಿ ಮೂಲದ ವೆಬ್‌ಸೈಟ್‌ಗಳಿಗೆ ರಷ್ಯಾದಲ್ಲಿ ನಿರ್ಬಂಧ ಹೇರಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಪೋಸ್ಟ್ ಗಳನ್ನು ಹಾಕುವವರಿಗೆ ೧೫ ವರ್ಷ ಗಳ ತನಕ ಜೈಲು ಶಿಕ್ಷೆಯ ಕಾನೂನನ್ನು ರಷ್ಯಾ ಸರ್ಕಾರ ಜಾರಿಗೆ ತಂದಿದೆ.