ಅಬುಜಾ: ದಕ್ಷಿಣ ನೈಜೀರಿಯಾದಲ್ಲಿ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಇಬ್ಬರು ಗರ್ಭಿಣಿ ಮಹಿಳೆ ಸೇರಿದಂತೆ 37 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಿವರ್ಸ್ ಸ್ಟೇಟ್‌ನ ಎಮೋಹುವಾ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿದ್ದು, ಮನೆಯಲ್ಲಿ ತಯಾರಿಸಿದ ಸಂಸ್ಕರಣಾ ಗಾರವು ಹತ್ತಿರದ ತೈಲ ಜಲಾಶಯಕ್ಕೆ ಬೆಂಕಿ ಹಚ್ಚಿದಾಗ ಈ ಘಟನೆ ನಡೆದಿದೆ.
ಸ್ಥಳೀಯ ನೈಜೀರಿಯಾ ಸೆಕ್ಯುರಿಟಿ ಮತ್ತು ಸಿವಿಲ್ ಡಿಫೆನ್ಸ್ ಕಾರ್ಪ್ಸ್ನ ವಕ್ತಾರ ಒಲುಫೆಮಿ ಅಯೋಡೆಲೆ ಮಾತ ನಾಡಿ, “ಬೆಂಕಿ ಏಕಾಏಕಿ ಬಹಳ ತಡವಾಗಿ ಪ್ರಾರಂಭವಾಯಿತು. 18 ಬಲಿಪಶುಗಳು ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದು, 25 ಗಾಯಾಳುಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.
ಮೃತರಲ್ಲಿ ಯುವಕರು, ಗರ್ಭಿಣಿ ಮಹಿಳೆ ಮತ್ತು ಮುಂದಿನ ತಿಂಗಳು ತನ್ನ ಮದುವೆ ಸಮಾರಂಭಕ್ಕೆ ತಯಾರಾಗು ತ್ತಿರುವ ಯುವತಿ ಎಲ್ಲರೂ ಸೇರಿದ್ದಾರೆ.
ನೈಜೀರಿಯಾದ ತೈಲ-ಸಮೃದ್ಧ ನೈಜರ್ ಡೆಲ್ಟಾ ಪ್ರದೇಶದಲ್ಲಿ ಅಕ್ರಮ ಸಂಸ್ಕರಣೆ ಸಾಮಾನ್ಯವಾಗಿದೆ. ಏಕೆಂದರೆ, ಬಡ ಸ್ಥಳೀಯರು ಲಾಭಕ್ಕಾಗಿ ಮಾರಾಟ ಮಾಡಲು ಇಂಧನವನ್ನು ತಯಾರಿಸಲು ಪೈಪ್‌ಲೈನ್‌ಗಳನ್ನು ಬಳಸುತ್ತಾರೆ.