Saturday, 14th December 2024

ಜು.೨೧ರಂದು ಶ್ರೀಲಂಕಾದ ಅಧ್ಯಕ್ಷರ ಆಯ್ಕೆಗೆ ಚುನಾವಣೆ

ಕೊಲಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಡೆಯಲಿದೆ.

ಹಂಗಾಮಿ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ, ಆಡಳಿತ ಪಕ್ಷ ಶ್ರೀಲಂಕಾ ಪೊಡು ಜನ ಪೆರಮುನದ (ಎಸ್‌ಎಲ್‌ಪಿಪಿ) ಭಿನ್ನ ಗುಂಪಿನ ನಾಯಕ 63 ವರ್ಷದ ಡುಲ್ಲಾಸ್‌ ಅಲಹಪ್ಪೆರುಮ, ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ 53 ವರ್ಷದ ಅರುಣಾ ಕುಮಾರ ಡಿಸ್ಸಾನಾಯಕೆ ಕಣದಲ್ಲಿರುವವರು.

ಸ್ಪರ್ಧೆಯಿಂದ ಹಿಂದೆ ಸರಿದ ವಿರೋಧಪಕ್ಷ ಸಮಗಿ ಜನ ಬಲವೇಗಯದ (ಎಸ್‌ಜೆಪಿ) ನಾಯಕ ಸಜಿತ್ ಪ್ರೇಮದಾಸ ಅವರೂ ಅಲಹಪ್ಪೆರುಮ ಅವರಿಗೆ ಬೆಂಬಲ ಘೋಷಿಸಿದರು. ಸಂಸತ್ತಿನ ಸದಸ್ಯ ಬಲ 225 ಆಗಿದ್ದು, ಹೊಸ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುವರು. ನೂತನ ಅಧ್ಯಕ್ಷರ ಅಧಿಕಾರವಧಿ ನವೆಂಬರ್ 2024ರವರೆಗೂ ಇರಲಿದೆ.

ದೇಶದ ಭವಿಷ್ಯ ಮತ್ತು ನಾನು ಪ್ರೀತಿಸುವ ಪ್ರಜೆಗಳ ಏಳಿಗೆ ದೃಷ್ಟಿಯಿಂದ ತಾವು ಸ್ಪರ್ಧೆ ಯಿಂದ ಹಿಂದೆ ಸರಿದಿದ್ದೇನೆ’ ಎಂದು ಪ್ರೇಮದಾಸ ಟ್ವೀಟ್ ಮಾಡಿದ್ದಾರೆ.

ಆರ್ಥಿಕ ವ್ಯವಸ್ಥೆಯು ಕುಸಿದ ಹಿಂದೆಯೇ ದೇಶದಾದ್ಯಂತ ಕಂಡುಬಂದ ಜನಾಕ್ರೋಶಕ್ಕೆ ಮಣಿದು ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜಪಕ್ಸ ರಾಜೀನಾಮೆ ನೀಡಿದ್ದರು.

ಸಂಸತ್ತಿನ ಸ್ಪೀಕರ್ ಕೂಡಾ ಹಕ್ಕು ಚಲಾಯಿಸುವುದು ಬುಧವಾರದ ಚುನಾವಣೆಯ ವಿಶೇಷವಾಗಿದೆ. 1978ರ ನಂತರ ಇದೇ ಮೊದಲ ಬಾರಿಗೆ ಸಂಸದರು ಅಧ್ಯಕ್ಷರನ್ನು ಚುನಾ ಯಿಸಲಿದ್ದಾರೆ.