Friday, 13th December 2024

ವಿಶ್ವಸಂಸ್ಥೆಗೆ ಆಫ್ಘಾನ್ ರಾಯಭಾರಿಯಾಗಿ ಸುಹೈಲ್ ಶಾಹೀನ್ ನೇಮಕ

ಕಾಬೂಲ್ : ವಿಶ್ವಸಂಸ್ಥೆಗೆ ಆಫ್ಘಾನಿಸ್ತಾನದ ರಾಯಭಾರಿಯನ್ನು ತಾಲಿಬಾನ್ ಘೋಷಿಸಿದ್ದು, ಸುಹೈಲ್ ಶಾಹೀನ್ ನನ್ನು ವಿಶ್ವಸಂಸ್ಥೆಯ ರಾಯಿಭಾರಿಯನ್ನಾಗಿ ನೇಮಿಸಿದೆ.

ಸುಹೈಲ್ ಶಾಹೀನ್ ವಿಶ್ವಸಂಸ್ಥೆಯಲ್ಲಿ ಆಫ್ಘಾನಿಸ್ತಾನದ ರಾಯಭಾರಿಯಾಗಲಿದ್ದಾರೆ ಎಂದು ತಾಲಿಬಾನ್ ಘೋಷಿಸಿದೆ. ಈ ವಾರ ನ್ಯೂಯಾರ್ಕ್ ನಲ್ಲಿ ವಿಶ್ವ ಸಂಸ್ಥೆಯ ವೇದಿಕೆಯಲ್ಲಿ ಶಾಹೀನ್ ಮಾತನಾಡಲಿದ್ದಾರೆ. ಅದಕ್ಕಾಗಿ ತಾಲಿಬಾನ್ ವಿಶ್ವಸಂಸ್ಥೆಗೆ ಪತ್ರ ಬರೆದು ವಿನಂತಿಸಿದೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮ್ಮನ್ನು ಗುರುತಿಸಲು ಮತ್ತು ಯುದ್ಧಪೀಡಿತ ದೇಶವನ್ನು ಪುನರ್ ನಿರ್ಮಿಸಲು ಸಹಾಯ ಬಯಸುವುದಾಗಿ ತಾಲಿಬಾನ್ ಹೇಳಿದೆ.

ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರಿಗೆ ಬರೆದ ಪತ್ರದಲ್ಲಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮಾತನಾಡುವಂತೆ ಮನವಿ ಮಾಡಿದರು.