Friday, 13th December 2024

ಶೂ ತಯಾರಕ ಕಂಪನಿಯಿಂದ 6000 ನೌಕರರ ವಜಾ

ನೋಯ್‌: ವಿಶ್ವದ ಅತಿ ದೊಡ್ಡ ಬ್ರಾಂಡೆಡ್ ಶೂ ತಯಾರಕ ಕಂಪನಿ ತೈವಾನ್‌ ಮೂಲದ ‘ಪೌ ಚೆನ್‌ ಕಾರ್ಪೊ ರೇಶನ್’ 6000 ನೌಕರರನ್ನು ವಜಾ ಮಾಡಲು ಮುಂದಾಗಿದೆ.

ಬೇಡಿಕೆ ಕುಸಿದಿದ್ದರಿಂದ ಕಂಪನಿ ಈ ನಿರ್ಧಾರ ಮಾಡಿದೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ವಿಷಯ ಗೊತ್ತಾಗಿದೆ.

ಕಂಪನಿಯ ಪೌಯೆನ್‌ ವಿಯೇಟ್ನಾಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವರರ ಪೈಕಿ 3,000 ಮಂದಿಯನ್ನು ಈ ತಿಂಗಳಿನಲ್ಲಿ ವಜಾ ಮಾಡಲು ಮುಂದಾಗಿದೆ. ಜತೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 3000 ನೌಕರರ ಗುತ್ತಿಗೆ ನವೀಕರಣ ಮಾಡದೇ ಇರಲು ಕಂಪನಿ ನಿರ್ಧರಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾಗಿ ವರದಿ ಮಾಡಿದೆ.

ಪೌಯೆನ್‌ ವಿಯೇಟ್ನಾಂ ಫ್ಯಾಕ್ಟರಿಯು ನೈಕಿ, ಆಡಿಡಾಸ್‌ ಮುಂತಾದ ಪ್ರಖ್ಯಾತ ಕಂಪನಿಗಳಿಗೆ ವಸ್ತುಗಳನ್ನು ಸರಬರಾಜು ಮಾಡುತ್ತದೆ. ವಿಯೇಟ್ನಾಂನ ಹೋ ಚಿ ಮಿನ್‌ ನಗರದಲ್ಲಿರುವ ಇದರ ಕಾರ್ಖಾನೆಯಲ್ಲಿ 50,500 ಉದ್ಯೋಗಿಗಳು ಇದ್ದಾರೆ.