Saturday, 14th December 2024

ಇಸ್ಕಾನ್ ರಾಧಾಕಾಂತ ದೇವಾಲಯದ ಮೇಲೆ ದಾಳಿ, ಮೂವರ ಹತ್ಯೆ

ಢಾಕಾ (ಬಾಂಗ್ಲಾದೇಶ): ಲಾಲ್ ಮೋಹನ್ ಸಹಾ ಬೀದಿಯಲ್ಲಿರುವ ಇಸ್ಕಾನ್ ರಾಧಾಕಾಂತ ದೇವಾಲಯದ ಮೇಲೆ 200ಕ್ಕೂ ಹೆಚ್ಚು ಜನರು ದಾಳಿ ನಡೆಸಿ, ದೇವಾಲಯವನ್ನು ಧ್ವಂಸ ಗೊಳಿಸಿದ್ದಾರೆ.

ಈ ದಾಳಿಯಲ್ಲಿ ಸುಮಂತ್ರ ಚಂದ್ರ ಶ್ರವಣ್, ನಿಹಾರ್ ಹಲ್ದಾರ್, ರಾಜೀವ್ ಭದ್ರಾ ಸೇರಿದಂತೆ ಅನೇಕ ಜನರು ದಾಳಿಯಲ್ಲಿ ಗಾಯ ಗೊಂಡಿದ್ದಾರೆ. ಈ ಗುಂಪಿನ ನೇತೃತ್ವವನ್ನು ಹಾಜಿ ಶಫಿವುಲ್ಲಾ ವಹಿಸಿದ್ದರು ಎಂದು ವರದಿಯಾಗಿದೆ. ಕಳೆದ ವರ್ಷವೂ ಇದೇ ದೇವಾಲಯದ ಮೇಲೆ ದಾಳಿ ನಡೆಸಲಾಗಿತ್ತು. ಆಗ ಕನಿಷ್ಠ ಮೂರು ಜನರನ್ನು ಹತ್ಯೆ ಮಾಡಲಾಗಿದೆ.

ಬಾಂಗ್ಲಾದೇಶದ ಕೊಮಿಲ್ಲಾ ಪಟ್ಟಣದ ನನುರ್ ದಿಘಿ ಸರೋವರದ ಬಳಿಯ ದುರ್ಗಾ ಪೂಜಾ ಪೆಂಡಾಲ್ ನಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಗಳಲ್ಲಿ ಸುದ್ದಿ ಹರಡಿದ ನಂತರ ಹಿಂಸಾಚಾರ ಭುಗಿಲೆದ್ದ ಬಳಿಕ ಘಟನೆ ನಡೆದಿದೆ.

ಈ ಹಿಂದೆ, ಢಾಕಾದ ಟಿಪ್ಪು ಸುಲ್ತಾನ್ ರಸ್ತೆ ಮತ್ತು ಚಿತ್ತಗಾಂಗ್ ನ ಕೊತ್ವಾಲಿಯಿಂದ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು.