Wednesday, 11th December 2024

ಗಣಿ ಕಾರ್ಮಿಕರ ಗುಂಪಿನ ಮೇಲೆ ದಾಳಿ: ಹತ್ತು ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿ ಗಣಿ ಕಾರ್ಮಿಕರ ಗುಂಪಿನ ಮೇಲೆ ತಾಲಿಬಾನ್ ಉಗ್ರರು ದಾಳಿಯಲ್ಲಿ ಹತ್ತು

ಮಂದಿ ಮೃತಪಟ್ಟು, 14 ಕಾರ್ಮಿಕರು ಗಾಯಗೊಂಡಿರುವುದಾಗಿ ವರದಿ ಯಾಗಿದೆ.

ರಾಜಧಾನಿ ಕಾಬೂಲ್ ನ ಬಾಘ್ಲಾನ್ ಎ ಮರ್ಕಾಝಿ ಜಿಲ್ಲೆಯ ಬಾಘ್ಲಾನ್ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡ ವರನ್ನು ಸ್ಥಳೀಯ ಪಟ್ಟಣವಾದ ಪುಲ್ ಎ ಖುಮ್ರಿಯ ಆಸ್ಪತ್ರೆಗೆ ರವಾನಿಸ ಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅಫ್ಘಾನ್ ಆಂತರಿಕ ಸಚಿವಾಲಯದ ವಕ್ತಾರ ತಾರೀಖ್ ಮಾತನಾಡಿ, ಘಟನೆಗೆ ತಾಲಿಬಾನ್ ಹೊಣೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ. ತಾಲಿಬಾನ್ ಉಗ್ರರು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಆವರಣದೊಳಕ್ಕೆ ಬಂದು ಗುಂಡಿನ ದಾಳಿ ನಡೆಸಿರುವು ದಾಗಿ ತಾರೀಖ್ ಮಾಹಿತಿ ನೀಡಿದ್ದಾರೆ.