Saturday, 14th December 2024

ಈ ಸುಂದರಿ ಬಾಳೆಹಣ್ಣಿನ ಪರೋಟ ಮಾಡುತ್ತಿರುವ ವೀಡಿಯೊ ವೈರಲ್​…

ಥೈಲ್ಯಾಂಡ್‌: ಸುಂದರವಾಗಿರುವ ಯುವತಿಯೊಬ್ಬಳು ಬಾಳೆಹಣ್ಣಿನ ಪರೋಟ ಮಾಡುತ್ತಿರುವ ವೀಡಿಯೊವನ್ನು ವೈರಲ್​ ಆಗಿದೆ.

ವಿಡಿಯೋ ವೈರಲ್​​ ಆಗುತ್ತಿದ್ದಂತೆ ಕೆಲವರು ಈಕೆ ನಿಜವಾಗಲೂ ಅಂಗಡಿ ನಡೆಸುತ್ತಿದ್ದಾಳಾ? ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಪುಯಿ ಎಂಬ ಹುಡುಗಿ ಥೈಲ್ಯಾಂಡ್‌ನವಳು ಮತ್ತು ಅವಳು ರಸ್ತೆಬದಿಯಲ್ಲಿ ಪರೋಟ ಸ್ಟಾಲ್ ನಡೆಸುತ್ತಿದ್ದಾಳೆ. ಪುಯಿ ಅವರ ಇನ್‌ಸ್ಟಾಗ್ರಾಮ್ ಖಾತೆ ಯಲ್ಲಿ ಇನ್ನೂ ಹಲವು ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಅವರು ಮತ್ತು ಅವರ ಸಹೋದರಿ ಸಹ ಕಾಣಿಸಿಕೊಂಡಿದ್ದಾರೆ. ಪೂಯಿಯ ವ್ಯವಹಾರದಲ್ಲಿ ಸಹೋದರಿಯೂ ಬೆಂಬಲಿಸುತ್ತಾಳೆ.

ಪುಯಿ ಮೊಟ್ಟೆಯ ಪರೋಟವನ್ನು ಮಾಡುತ್ತಿರುವುದು ಕಂಡುಬರುತ್ತದೆ. ಇದರಲ್ಲಿ ಅವಳು ಪರೋಟವನ್ನು ತುಂಬಾ ತೆಳ್ಳಗೆ ಸುತ್ತುತ್ತಾಳೆ ಮತ್ತು ನಂತರ ಅದಕ್ಕೆ ಸಣ್ಣ ಬಾಳೆಹಣ್ಣಿನ ತುಂಡುಗಳನ್ನು ಸೇರಿಸಿ ಮತ್ತು ಅದನ್ನು ಬೇಯಿಸುತ್ತಾಳೆ. ಮೊಟ್ಟೆಯನ್ನು ಒಡೆದು ಪರೋಟದಲ್ಲಿ ಹಾಕುತ್ತಾಳೆ.

ನಂತರ ಅದನ್ನು ಸರಿಯಾಗಿ ಬೇಯಿಸಿದ ನಂತರ ಗ್ರಾಹಕರಿಗೆ ತಿನ್ನಲು ಕೊಡುತ್ತಾಳೆ.