Wednesday, 11th December 2024

ಥಾಯ್ಲೆಂಡ್​ ಮಹಿಳಾ ಪತ್ರಕರ್ತೆಗೆ ಕಪಾಳಮೋಕ್ಷ..!

ಥಾಯ್ಲೆಂಡ್​ನಲ್ಲಿ ಮಹಿಳಾ ಪತ್ರಕರ್ತೆ ಕೇಳಿದ ಪ್ರಶ್ನೆಗೆ ರೊಚ್ಚಿಗೆದ್ದ ಹಿರಿಯ ರಾಜಕಾರಣಿ ಆಕೆಯ ಕಪಾಳಕ್ಕೆ ಹೊಡೆದಿದ್ದಾರೆ.

ಹಿರಿಯ ರಾಜಕಾರಣಿ ಮತ್ತು ಮಾಜಿ ಸೇನಾ ಮುಖ್ಯಸ್ಥ ಪ್ರವಿತ್ ವಾಂಗ್ಸುವಾನ್ (79) ಅವರಿಗೆ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಿದಾಗ ಕಪಾಳಕ್ಕೆ ಹೊಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್​ ಆಗಿದ್ದು ನೆಟ್ಟಿಗರು ವಾಂಗ್ಸುವಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಥಾಯ್ಲೆಂಡ್ ಸಂಸತ್ತು ತನಿಖೆಗೆ ಆದೇಶಿಸಿದೆ.

ಪಲಾಂಗ್ ಪ್ರಚಾರತ್ ಪಾರ್ಟಿ (ಪಿಪಿಆರ್‌ಪಿ) ನಾಯಕ ವಾಂಗ್ಸುವಾನ್ ಅವರ ಬಳಿ ಹೊಸ ಪ್ರಧಾನಿ ಪೇಟೊಂಗ್ಟಾರ್ನ್ ಶಿನಾವತ್ರಾ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ಥಾಯ್‌ ಪಿಬಿಎಸ್ ವರದಿಗಾರರಿಗೆ ಹೊಡೆದರು. ಹಿರಿಯ ರಾಜಕಾರಣಿ ವಿರುದ್ಧ ವರದಿಗಾರರು ದೂರನ್ನು ದಾಖಲಿಸಿದ್ದಾರೆ. ನಂತರ ಥಾಯ್ ಸಂಸತ್ತು ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದೆ.​

ವಾಂಗ್ಸುವಾನ್ 2000 ರ ದಶಕದ ಆರಂಭದಲ್ಲಿ ಥೈಲ್ಯಾಂಡ್‌ನ ಸೇನಾ ಮುಖ್ಯಸ್ಥರಾಗಿದ್ದರು. ಅವರು 2014 ರ ದಂಗೆಯ ಮಾಸ್ಟರ್​ ಮೈಂಡ್​ನಲ್ಲಿ ಒಬ್ಬರಾಗಿದ್ದರು, ಅದು ಆಗಿನ ಪ್ರಧಾನಿ ಯಿಂಗ್ಲಕ್ ಶಿನವತ್ರಾ ಅವರನ್ನು ಪದಚ್ಯುತಗೊಳಿಸಿತು. ನಂತರ ಅವರು ಕಳೆದ ವರ್ಷದವರೆಗೆ ಆಳಿದ ಮಿಲಿಟರಿ ಬೆಂಬಲಿತ ಸರ್ಕಾರದ ಅಡಿಯಲ್ಲಿ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.