Friday, 13th December 2024

ಟೆಲ್ ಅವೀವ್ ಬಳಿ ಮೂವರ ಇರಿದು ಹತ್ಯೆ, ನಾಲ್ವರಿಗೆ ಗಾಯ

ಜೆರುಸಲೇಂ: ಟೆಲ್ ಅವೀವ್ ಬಳಿ ದಾಳಿಕೋರನೊಬ್ಬ ತನ್ನ ಮುಂದೆ ನಡೆದು ಬರುತ್ತಿದ್ದವರನ್ನು ಚೂರಿ ಯಿಂದ ಇರಿದ ಮೂವರನ್ನು ಕೊಂದು ಇತರ ನಾಲ್ವರು ಗಾಯಗೊಳಿಸಿದ್ದಾನೆ.

ಇದು ಪ್ಯಾಲೆಸ್ತೀನ್ ಉಗ್ರರ ದಾಳಿ ಎಂದು ಶಂಕಿಸಲಾಗಿದ್ದು, ದಾಳಿಕೋರರಿಗಾಗಿ ಹೆಲಿಕಾಪ್ಟರ್ ಕೂಡ ಬಳಸಿ ಭಾರಿ ಶೋಧ ನಡೆಸಲಾಗಿದೆ.

ದಾಳಿಕೋರನ ಗುರುತು ಪತ್ತೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಇಸ್ರೇಲಿ-ಪ್ಯಾಲೆಸ್ತೀನ್ ಉದ್ವಿಗ್ನತೆ ಹೆಚ್ಚಿದೆ. ಇಸ್ರೇಲ್‍ನಲ್ಲಿ ದಾಳಿಗಳು, ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಜೆರುಸಲೆಮ್‍ನ ಅತ್ಯಂತ ಸೂಕ್ಷ್ಮ ಪವಿತ್ರ ಸ್ಥಳದಲ್ಲಿ ಹಿಂಸಾಚಾರ ಆತಂಕ ಮೂಡಿಸಿದೆ.

ಇಸ್ರೇಲ್ ನಲ್ಲಿ ಗುರುವಾರ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿತ್ತು , ಇದೇ ವೇಳೆ ದಾಳಿ ನಡೆದಿದೆ.