Monday, 14th October 2024

ಕಚೇರಿ ಬಾಡಿಗೆ ಪಾವತಿಸದ ಟ್ವಿಟರ್‌’ಗೆ ಲೀಗಲ್‌ ನೋಟಿಸ್‌

ವಾಷಿಂಗ್ಟನ್‌: ಟ್ವಿಟರ್‌ ಕಂಪನಿಯು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಕಚೇರಿಗೆ ಬಾಡಿಗೆ ಪಾವತಿಸದೇ ಬಾಕಿ ಉಳಿಸಿ ಕೊಂಡಿರುವ ಕಾರಣದಿಂದ ಕಟ್ಟಡ ಮಾಲೀಕರು ಲೀಗಲ್‌ ನೋಟಿಸ್‌ ನೀಡಿದ್ದಾರೆ ಎಂದು ವರದಿ ಮಾಡಿವೆ.

ಸ್ಯಾನ್‌ಫ್ರಾನ್ಸಿಸ್ಕೊದ ಹಾರ್ಟ್‌ಫೋರ್ಡ್‌ ಕಟ್ಟಡದ 30 ಅಂತಸ್ತಿನ ಕಚೇರಿ ಸ್ಥಳದಲ್ಲಿ ಟ್ವಿಟರ್‌ ಕಂಪನಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೆಲವು ತಿಂಗಳಿಂದ ಕಂಪನಿ ಬಾಡಿಗೆ ಕಟ್ಟದೇ ಇರುವುದರಿಂದ ಮಾಲೀಕರು ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಇದೇ ರೀತಿ ಟ್ವಿಟರ್‌ ಕಂಪನಿಯು ತನ್ನ ಪ್ರಧಾನ ಕಚೇರಿ ಹಾಗೂ ಇತರೆ ಜಾಗತಿಕ ಕಚೇರಿಗಳ ಬಾಡಿಗೆ ಕೂಡ ಪಾವತಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಟ್ವಿಟರ್‌ ಸಂಸ್ಥೆಯು ಈ ರೀತಿ ನೋಟಿಸ್‌ ಪಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಯೂ ಎರಡು ಚಾರ್ಟರ್‌ ವಿಮಾನ ಗಳ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಕೋರ್ಟ್‌ ನಿಂದ ಕಂಪನಿಗೆ ನೋಟಿಸ್‌ ಬಂದಿತ್ತು.

Read E-Paper click here