Friday, 13th December 2024

ದಕ್ಷಿಣ ಫ್ಲೋರಿಡಾದಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, 25 ಜನರಿಗೆ ಗಾಯ

ಮಿಯಾಮಿ: ದಕ್ಷಿಣ ಫ್ಲೋರಿಡಾದ ಔತಣಕೂಟ ಸಭಾಂಗಣದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, 20 ರಿಂದ 25 ಜನರು ಗಾಯ ಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಹಿಯಾಲಿಯಾ ಬಳಿಯ ವಾಯುವ್ಯ ಮಿಯಾಮಿ-ಡೇಡ್ ಕೌಂಟಿಯ ಎಲ್ ಮುಲಾ ಔತಣಕೂಟದಲ್ಲಿ ಭಾನುವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ.

ಸಂಗೀತ ಕಚೇರಿಗಾಗಿ ಔತಣಕೂಟ ಸಭಾಂಗಣವನ್ನು ಬಾಡಿಗೆಗೆ ನೀಡಲಾಗಿತ್ತು. ಮೂರು ಜನರು ಕಾರಿನಿಂದ ಹೊರಬಂದು, ಹೊರಗೆ ನೆರೆದಿದ್ದ ಗುಂಪಿನ ಮೇಲೆ ಗುಂಡಿನ ಮಳೆಗರೆದರು ಎಂದು ಪೊಲೀಸ್ ನಿರ್ದೇಶಕ ಆಲ್ಫ್ರೆಡೋ ತಿಳಿಸಿದ್ದಾರೆ.